ಮಹಾರಾಷ್ಟ್ರ ಮೂಲದ ಕಾರ್ಮಿಕರಿಗೆ ಭಾರತ್ ಮುಕ್ತಿ ಮೋರ್ಚಾದಿಂದ ನೆರವು

0
34

ಕಲಬುರಗಿ: ಕಳೆದ 6 ತಿಂಗಳಿನಿಂದ ಇಲ್ಲಿನ ಕಾಳಗಿ ತಾಲೂಕಿನ ಹಲಚೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾವದಗಿ ಗ್ರಾಮದಲ್ಲಿ 10 ಕುಟುಂಬಗಳು ಹೂಲವೊಂದರಲ್ಲಿ ಕಟ್ಟಿಗೆ ಕಡಿದು ಬದುಕುವ ಕುಟುಂಬಗಳಿಗೆ ಭಾರತ್ ಮುಕ್ತಿ ಮೋರ್ಚಾದ ತಂಡ ಮಾಹಿತಿ ಆಧರಿಸಿ ತಾಲ್ಲೂಕು ಆಡಳಿತದಿಂದ ನೆರವು ತಲುಪಿಸುವ ಭರವಸೆ ಇಲಾಖೆ ನೀಡಿದೆ ಎಂದು ತಿಳಿದುಬಂದಿದೆ.

ಕಟ್ಟಿಗೆ ಕಡಿದು, ಇದ್ದಲಿ ಮಾಡಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಈ ಕುಟುಂಬ, ಮಹಾಮಾರಿ ಕೊರೊನಾದಿಂದ ಕುಟುಂಬ ನಡೆಸುವುದು ಕಷ್ಟಕರವಾಗಿದೆ ಮೋರ್ಚಾದ ತಂಡದೊಂದಿಗೆ ಹಂಚಿಕೊಂಡು, ಇಲ್ಲಿಯವರೆಗೆ ಯಾವ ಅಧಿಕಾರಿಗಳು ನಮಗೆ ಬಂದು ಧೈರ್ಯ ಹೇಳುವುದು ಮತ್ತು ಸಾಹಾಯಕ್ಕೆ ಬಂದಿಲ್ಲಾ ವೆಂದು ಅಲ್ಲಿನ ನಿವಾಸಿ ರಾಮಚಂದ್ರ ಪವಾರ್, ಜಯರಾಮ ಬೈರ, ಇಂದಿರಾ ಪವಾರ್, ಅನಿತಾ ಪವಾರ್, ರೋಹಿದಾಸ ರವರು ಸಾಮಾಜಿಕ ಕಾರ್ಯಕರ್ತ ಹಾಗೂ ಕೊರೊನಾ ಸೈನಿಕ ಸಂತೋಷ ಮಾಳಗಿ ಅವರ ಮುಂದೆ ಅಳಲು ತೊಡಿಕೊಂಡಿದ್ದಾರೆ.

Contact Your\'s Advertisement; 9902492681

ಸಂಘಟನೆ ನೇತೃತ್ವದಲ್ಲಿ ಕಾಳಗಿ ದಂಡಾಧಿಕಾರಿ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದಾಗ ನಾನು ಖುದ್ದಾಗಿ ಭೇಟಿ ಮಾಡಿ ಕೊಡಲೆ ಅವರಿಗೆ ಆಹಾರ ಕಿಟ್ ಮಾಸ್ಕ್ ನೀಡುವ ವ್ಯವಸ್ಥೆ ಮಾಡುತ್ತೆನೆಂದು ಎಂದು ಭರವಸೆ ನೀಡಿದ್ದಾರೆ.

ಅಲ್ಲದೇ ಆಶಾ ಕಾರ್ಯಕರ್ತೆ, ಹಾಗೂ ಗ್ರಾಮ ಪಂಚಾಯ್ತಿ ವೈದ್ಯಕೀಯ ಸಿಬ್ಬಂದಿಗಳಿಗೆ ಅವರು ಆರೋಗ್ಯ ವಿಚಾರಿಸಲು ಸೂಚನೆ ನೀಡುವ ಆದೇಶ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here