ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ವೇತನಕ್ಕಾಗಿ ಸಿಎಂಗೆ ಮನವಿ

0
65

ಕಲಬುರಗಿ: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ವೇತನವನ್ನು ಕೊಡಬೇಕೆಂದು ಕೆಎಸ್‍ಆರ್‍ಟಿಸಿ, ಸ್ಟಾಫ್ ಮತ್ತು ವರ್ಕರ್ಸ್ ಫೇಡರೇಷನ್ ವತಿಯಿಂದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಯಿತು ಎಂದು ಫೇಡರೇಷನ್‍ನ ಅಧ್ಯಕ್ಷ ಹೆಚ್.ಬಿ. ಅನಂತಸುಬ್ಬರಾವ್ ತಿಳಿಸಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ (ಕೆಎಸ್‍ಆರ್‍ಟಿಸಿ. ಬಿಎಂಟಿಸಿ, ಎನ್‍ಡಬ್ಲ್ಯೂಕೆಆರ್‍ಟಿಸಿ, ಎನ್‍ಇಕೆಆರ್‍ಟಿಸಿ) ಸುಮಾರು 1.25 ಲಕ್ಷಕ್ಕೂ ಹೆಚ್ಚು ಜನ ನೌಕರರು, ಅಧಿಕಾರಿಗಳು ಬಹಳ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಾರಿಗೆ ನಿಮಗಮಗಳು ರಾಷ್ಟ್ರೀಯ ಹಾಗೂ ಅಂರತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಪಡೆದಿವೆ ಎಂದರು.

Contact Your\'s Advertisement; 9902492681

ಮಹಾಮಾರಿ ಕೋವಿಡ್-19ರ ಪರಿಣಾಮವಾಗಿ ಲಾಕ್‍ಡೌನ್ ಘೋಷಣೆ ಮಾಡಿದ ನಂತರ ಮಾರ್ಚ್ 22 ರಿಂದ ನಮ್ಮ ನಿಗಮಗಳ ಯಾವುದೇ ಬಸ್ ಸಂಚಾರವಾಗುತ್ತಿಲ್ಲ. ಅವಶ್ಯಕತೆಗನುಗುಣವಾಗಿ ಕೆಲವು ವಾಹನಗಳು ಮಾತ್ರ ಸಂಚರಿಸುತ್ತಿವೆ. ಅವುಗಳಿಂದ ಯಾವುದೇ ಆದಾಯವಿಲ್ಲ. ಇತ್ತೀಚೆಗೆ ಸರ್ಕಾರದ ಆದೇಶದ ಮೇರೆಗೆ ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ಊರುಗಳಿಗೆ ಸೇರಿಸಲು ನಮ್ಮ ನಿಗಮಗಳು ಶ್ರಮಿಸುತ್ತಿವೆ. ಇದರಿಂದ ಕೂಡ ನಿಗಮಗಳಿಗೆ ಯಾವುದೇ ಆದಾಯವಿಲ್ಲ. ಇದಕ್ಕೆ ಮುಂಚೆಯೇ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಕೆಟ್ಟಿತ್ತು. ಇದಕ್ಕೆ ಹಲವಾರು ನೈಜ ಕಾರಣಗಳಿಗೆ. ಈಗ ನಿಗಮಗಳ ಹಣಕಾಸಿನ ಮುಗ್ಗಟ್ಟು ಮುಗಿಲುಮುಟ್ಟಿದೆ. ಆದರೂ ಕೂಡ ಮಾರ್ಚ್ 2020 ರ ವೇತನವನ್ನು ಎಲ್ಲ ನೌಕರರಿಗೂ ಪಾವತಿಸಲಾಗಿದೆ. ಸಾರಿಗೆ ನಿಗಮ ಅಥವಾ ನಿಗಮಗಳು ಎಂದೂ ಕೂಡ ತಮ್ಮ ನೌಕರರಿಗೆ ವೇತನ ಕೊಡಲು ಸರ್ಕಾರದಿಂದ ಹಣ ಪಡೆದಿಲ್ಲ ಎಂದರು.

ಈ ಏಪ್ರೀಲ್ 2020ರ ವೇತನಕ್ಕೆ ನಿಗಮಗಳಲ್ಲಿ ಹಣವಿಲ್ಲದ ಕಾರಣ ರಾಜ್ಯ ಸರ್ಕಾರ ಸಹಾಯಹಸ್ತವನ್ನು ನೀಡಬೇಕೆಂದು ನಿಗಮಗಳು ಕೇಳಿವೆ. ನಿಗಮಗಳಲ್ಲಿ ಪ್ರತಿ ತಿಂಗಳ 1ನೇ ತಾರೀಖಿನಿಂದ ವಿವಿಧ ವರ್ಗಗಳ ನೌಕರರಿಗೆ ವೇತನ ನೀಡಲಾಗುತ್ತದೆ. ಈ ಬಾರಿ ಇನ್ನೂ ವೇತನ ನೀಡುವ ಪ್ರಕ್ರಿಯೇ ಆರಂಭವಾಗಿಲ್ಲ. ನಿಗಮಗಳ ಲೆಕ್ಕಾಚಾರದ ಪ್ರಕಾರ ಈ ವೇತನ ಪಾವತಿಗೆ ಸುಮಾರು 330 ಕೋಟಿ ರೂ.ಗಳು ಬೇಕಾಗುತ್ತದೆ ಎಂದರು.

ಕೆಲವು ಹಸಿರು ವಲಯಗಳಲ್ಲಿ ನಮ್ಮ ವಾಹನಗಳು ಓಡಾಡಲು ಸೂಚನೆಗಳಿದ್ದರೂ ಕೋವಿಡ್-19ರ ನಿರ್ಬಂಧಗಳನ್ನು ಪಾಲಿಸುವ ದೃಷ್ಠಿಯಿಂದ ಹೆಚ್ಚಿನ ಆದಾಯವನ್ನು ಈ ವಾಹಗಳಿಂದ ಆಪೇಕ್ಷಿಸುವುದು ಸಾಧ್ಯವಿಲ್ಲ ಎಂದರು.

ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಕೂಡ ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಬಲಪಡಿಸುವ ವಿಷಯವನ್ನು ಹಲವಾರು ಬಾರಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ನಮ್ಮ ಸಹಮತವಿದೆ. ತಾವು ನಮ್ಮ ಫೇಡರೇಶನ್ ನಿಯೋಗಕ್ಕೆ ಈ ವಿಷಯವನ್ನು ಚರ್ಚಿಸಲು ವೇಳೆ ಕೊಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸುತ್ತೇವೆ.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here