ಕೊರೋನಾ ಸೋಂಕಿನಿಂದ ಮತ್ತೊಬ್ಬ 17 ವರ್ಷದ ಬಾಲಕ ಗುಣಮುಖ

0
47

ಕಲಬುರಗಿ: ನಗರದ ಖಮರ್ ಕಾಲೋನಿ ಪ್ರದೇಶದ 17 ವರ್ಷದ ಬಾಲಕ (ರೋಗಿ ಸಂಖ್ಯೆ-391) ಕೊರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಮಂಗಳವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಅವರು ತಿಳಿಸಿದ್ದಾರೆ.

ಈ ಬಾಲಕ ರೋಗಿ ಸಂ-175ರ‌ ಸಂಪರ್ಕಕ್ಕೆ ಒಳಗಾಗಿದ್ದರಿಂದ ಏಪ್ರಿಲ್ 20 ರಂದು ಕೊರೋನಾ ಸೋಂಕು ಕಂಡುಬಂದು ಚಿಕಿತ್ಸೆಗೆ ದಾಖಲಾಗಿದ್ದರು.

Contact Your\'s Advertisement; 9902492681

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಪತ್ತೆಯಾದ 63ರಲ್ಲಿ ಒಟ್ಟು 22 ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 35 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here