ಕಲಬುರಗಿ: ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ರಾಜ್ಯದ ರೈತರ, ನೇಕಾರರ, ಕಾರ್ಮಿಕರ, ಹೂ ಬೆಳೆಗಾರರ, ಸವಿತಾ(ಕ್ಷೌರಿಕ) ಸಮಾಜ,ಮಡಿವಾಳರ, ಆಟೋ, ಟ್ಯಾಕ್ಸಿ ಚಾಲಕರ ಕೈಹಿಡಿದು ರೂ.1610 ಕೋಟಿ ವಿಶೇಷ ಪ್ಯಾಕೇಜ್ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ಭಾರೀ ಪರಿಣಾಮ ಬೀರಿದ್ದರೂ, ನಾಡಿನ ಜನರ ಹೀತದೃಷ್ಟಿಯಿಂದ, ಜನರನ್ನು ಸಂಕಷ್ಟದಿಂದ ಪಾರು ಮಾಡಲು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು 1,610 ಕೋಟಿ ರೂ. ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.
* ಕಟ್ಟಡ ಕಾರ್ಮಿಕರಿಗೆ 5,000 ರೂ. ಸಹಾಯಧನ.
* ನೇಕಾರರಿಗೆ 5,000 ರೂ. ಸಹಾಯಧನ.
* ಆಟೋ/ಟ್ಯಾಕ್ಸಿ ಚಾಲಕರಿಗೆ 5,000 ರೂ.ಸಹಾಯಧನ.
* ಮಡಿವಾಳರು, ಕ್ಷೌರಕರಿಗೆ 5,000 ರೂ.ಸಹಾಯಧನ.
* ಹೂ.ಬೆಳೆಗಾರರಿಗೆ ಗರಿಷ್ಟ 25,000 ರೂ.ಪರಿಹಾರ ಧನ.
* ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪರಿಹಾರ ಸೇರಿದಂತೆ ಹಲವಾರು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಇದರಿಂದ ಸಾವಿರಾರು ಜನರಿಗೆ ಅನುಕೂಲವಾಗಲಿದೆ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.