ಸಿಡಿಪಿಓ ರಾಜಕುಮಾರ ರಾಠೋಡ ಅಮಾನತು ವಾಪಸ್ ಪಡೆಯಲು ಆಗ್ರಹ

0
113

ಚಿತ್ತಾಪುರ: ಕೊರೊನಾ ಲಾಕ್‌ಡೌನ್ ಮತ್ತು ನಿಷೇಧಾಜ್ಞೆ ನಡುವೆಯೂ ನಡೆದ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಡಿಪಿಓ ರಾಜಕುಮಾರ ರಾಠೋಡ ಅಮಾನತು ವಾಪಸ್ ಪಡೆದು, ಯಥಾಪ್ರಕಾರ ಚಿತ್ತಾಪುರ ಸಿಡಿಪಿಒ ಹುದ್ದೆಯಲ್ಲಿಯೇ ಮುಂದುವರೆಸಬೇಕು ಎಂದು ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಮಹ್ಮದ್ ಇಬ್ರಾಹಿಂ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.

ಸಿಡಿಪಿಓ ರಾಜಕುಮಾರ ರಾಠೋಡ ಅವರನ್ನು ಸೆಕ್ಟçಲ್ ಮೆಜಿಸ್ಟೆçÃಟ್ ಆಗಿ ನೇಮಕ ಮಾಡಿದಾಗಿನಿಂದ ತಮ್ಮ ಜವಾಬ್ದಾರಿಗಳನ್ನು ಚಾಚು ತಪ್ಪದೇ ಹಗಲು ರಾತ್ರಿ ಎನ್ನದೇ ಬಹಳ ನಿಷ್ಠೇಯಿಂದ ಅಷ್ಟೇ ಪ್ರಾಮಾಣಿಕತೆಯಿಂದ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಂತಹ ಒಬ್ಬ ದಕ್ಷ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿರುವುದು ಎಲ್ಲರಿಗೂ ಬಹಳ ಬೇಸರವನ್ನುಂಟು ಮಾಡಿದೆ, ಆದ್ದರಿಂದ ಕೂಲಕುಂಶವಾಗಿ ಪರಿಶೀಲಿಸಿ ಅಮಾನತು ಆದೇಶ ಹಿಂಪಡೇದು ಮತ್ತೇ ಯಥಾ ಪ್ರಕಾರ ಚಿತ್ತಾಪುರ ಸಿಡಿಪಿಓ ಹುದ್ದೆಯಲ್ಲಿಯೇ ಮುಂದುರೆಸುವ ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ರಥೋತ್ಸವ ನಾಲ್ಕು ದಿನಗಳ ಮುಂಚೆಯೇ ಸಿದ್ದಲಿಂಗೇಶ್ವರ ಮಠದ ಆಡಳಿತ ಮಂಡಳಿಯವರು ರಥೋತ್ಸವ ರದ್ದು ಪಡಿಸಲಾಗಿದೆ ಎಂದು ಲಿಖಿತ ಮೂಲಕ ಪತ್ರ ಮತ್ತು ಪತ್ರಿಕೆ ಹೇಳಿಕೆ ಮೂಲಕ ನೀಡಿದ್ದಾರೆ, ಆದರೆ ಇಲ್ಲಿ ಹೇಳಿದ ಪ್ರಕಾರ ರಥೋತ್ಸವ ರದ್ದು ಮಾಡದೇ ಎಲ್ಲರ ಕಣ್ತಪ್ಪಿ ಮೋಸದಿಂದ ಬೆಳ್ಳಂಬೆಳಿಗ್ಗೆಯೇ ರಥೋತ್ಸವ ಮಾಡಿದ್ದಾರೆ, ಹೀಗಾಗಿ ಇಲ್ಲಿ ಮಠದ ಆಡಳಿತ ಮಂಡಳಿಯವರ ತಪ್ಪೇ ಹೊರತು ಅಧಿಕಾರಿಗಳ ತಪ್ಪಲ್ಲ, ಇಲ್ಲಿ ಮಾಡದ ತಪ್ಪಿಗೆ ಒಬ್ಬ ನಿಷ್ಠಾವಂತ ಅಧಿಕಾರಿ ಶಿಕ್ಷೆ ಅನುಭವಿಸುವಂತಾಗಿದೆ ಎಂದರು.

ರಾಜಕುಮಾರ ರಾಠೋಡ ಚಿತ್ತಾಪುರ ಶಿಶು ಅಭಿವೃದ್ದಿ ಯೋಜನಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಏಳೇ ತಿಂಗಳಾದರೂ ಅಲ್ಪ ಸಮಯದಲ್ಲೇ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದಾರೆ ಮತ್ತು ಎಲ್ಲ ಅಂಗನವಾಡಿ ಮೇಲ್ವಿಚಾರಕರಲ್ಲಿ ಮತ್ತು ಕಾರ್ಯಕರ್ತೆಯರಲ್ಲಿ ಶಿಸ್ತು ಬದ್ದತೆ ಕಲಿಸಿ ಕೊಟ್ಟಿದ್ದಾರೆ ಅವರಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಆತ್ಮಸ್ತೈರ್ಯ ತುಂಬಿದ್ದಾರೆ, ಪ್ರೋಬಷ್ನೇರಿ ಅವಧಿಯಲ್ಲಿದ್ದ ಸಿಡಿಪಿಓ ಕರ್ತವ್ಯಕ್ಕೆ ಯಾವುದೇ ದಕ್ಕೆ ಆಗದಂತೆ ಮತ್ತು ಇಲಾಖೆಗೆ ಕೆಟ್ಟ ಹೆಸರು ತರದಂತೆ ಕರ್ತವ್ಯವೇ ದೇವರು ಎಂದು ಭಾವಿಸಿಕೊಂಡಿದ್ದ ಇಂತಹ ಅಧಿಕಾರಿಗೆ ಅಮನಾತು ಆದೇಶ ಅವರ ಮುಂದಿನ ಜೀವನಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here