ಸುರಪುರ: ಪ್ರತಿವರ್ಷ ಬುದ್ಧ ಪೌರ್ಣಮಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು.ಆದರೆ ಈ ವರ್ಷ ಕೊರೊನಾ ವೈರಸ್ ಕಾರಣದಿಂದ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಸರಳವಾಗಿ ಬುದ್ಧ ಜಯಂತಿ ಆಚರಿಸಲಾಗುತ್ತಿದೆ ಎಂದು ಬುದ್ಧ ಬಸವ ಅಂಬೇಡ್ಕರ್‍ರ 129ನೇ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಮಾತನಾಡಿದರು.
ಸಮಿತಿಯಿಂದ ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ ಬುದ್ಧ ಜಯಂತಿ ಆಚರಣೆಯನ್ನು ಉದ್ದೇಶಿಸಿ ಮಾತನಾಡಿ,ಈಗ ಇಡೀ ದೇಶವೆ ಸಂದಿಗ್ಧ ಸ್ಥಿತಿಯಲ್ಲಿದೆ.ನಿತ್ಯವು ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿದೆ.ಇದನ್ನು ಹೋಗಲಾಡಿಸುವಂತೆ ಇಂದಿನ ಜಯಂತಿ ಆಚರಣೆಯ ಪ್ರಾರ್ಥನೆ ಮೂಲಕ ಬುದ್ಧ ದೇವನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧನ ಮೂರ್ತಿಯ ಮುಂದೆ ದೀಪಗಳ ಬೆಳಗಿ ನಮಿಸಲಾಯಿತು.ನಂತರ ತ್ರಿಸರಣ ಮತ್ತು ಪಂಚಶೀಲ ಪಠಣದೊಂದಿಗೆ ಪ್ರಾರ್ಥಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ರಾಹುಲ್ ಹುಲಿಮನಿ,ಮಾಳಪ್ಪ ಕಿರದಳ್ಳಿ,ನಿಂಗಣ್ಣ ದೇವರಗೋನಾಲ,ಉಪನ್ಯಾಸಕ ಮಲ್ಲಿಕಾರ್ಜುನ ಕಮತಗಿ,ಮಂಜುನಾಥ ಬಾರಿ,ಮಹೇಶ ಸುರಪುರಕರ್ ವೆಂಕಟೇಶ ಸುರಪುರ ಮರೆಪ್ಪ ತೇಲ್ಕರ್ ಅಪ್ಪಣ್ಣ ಗಾಯಕವಾಡ್, ಲಕ್ಷ್ಮಣ ದೇವರಗೋನಾಲ ನಾಗರಾಜ ಪಾಳದಕೇರಾ ಸೇರಿದಂತೆ ಅನೇಕರಿದ್ದರು.