ವಿಷದ ನೀರು ಕುಡಿದು ಚಿಕ್ಕನಹಳ್ಳಿ ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕುರಿಗಳ ಸಾವು

0
31

ಸುರಪುರ: ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿಷ ಪೂರಿತ ನೀರು ಕುಡಿದು 22 ಕುರಿಗಳು ಸಾವನ್ನಪ್ಪಿದ ಘಟನೆ ನಡೆದಿದೆ.ಚಿಕ್ಕನಹಳ್ಳಿ ಗ್ರಾಮದ ಹಯ್ಯಾಳಪ್ಪ ತಂದೆ ನಿಂಗಪ್ಪ ಯಾದವ್ ಎನ್ನುವವರಿಗೆ ಸೇರಿದ ಕುರಿಗಳನ್ನು,ಬೆಳಿಗ್ಗೆ ಮೇಯಿಸಲು ಗ್ರಾಮದ ಎಲ್ಲಮ್ಮ ದೇವಸ್ಥಾನದ ಹಿಂಭಾಗದಲ್ಲಿಯ ಭತ್ತದ ಗದ್ದೆಗೆ ಹೊಡೆದುಕೊಂಡು ಹೋಗಿದ್ದು,ಕುರಿಗಳನ್ನು ಮೇಯಿಸಿದ ನಂತರ ಅಲ್ಲಿಯೆ ಗದ್ದೆಯಲ್ಲಿದ್ದ ನೀರನ್ನು ಕುಡಿಸಲಾಗಿದ್ದು,ನೀರು ಕುಡಿದ ಒಂದು ಗಂಟೆಯ ನಂತರ ಒಂದೊಂದು ಕುರಿಗಳು ಅಲ್ಲಲ್ಲಿ ಬಿದ್ದು ಸಾವನ್ನಪ್ಪಿವೆ.

ಸುದ್ದಿ ತಿಳಿದು ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ವೈದ್ಯ ಡಾ: ಸುರೇಶ ಅಚ್ಚಡ್ ಭೇಟಿ ನೀಡಿ,ಪರಿಶೀಲನೆ ನಡೆಸಿ ಕುರಿಗಳ ಸಾವಿನ ಬಗ್ಗೆ ಈಗಲೆ ನಿಖರವಾಗಿ ಹೇಳಲಾಗದು,ಪಂಚನಾಮೆ ನಡೆಸಿ ಪರೀಕ್ಷೆಯ ನಂತರ ಸಾವಿನ ಬಗ್ಗೆ ತಿಳಿಸಲಾಗುವುದು ಅಲ್ಲದೆ ಕುರಿಗಳ ಸಾವಿಗೆ ಪರಿಹಾರಕ್ಕೂ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಕುರಿಗಳ ಸಾವಿನಿಂದ ಚಿಂತೆಗೀಡಾಗಿರುವ ಕುರಿಗಳ ಮಾಲೀಕ ಹಯ್ಯಾಳಪ್ಪ ಸರಕಾರ ಪರಿಹಾರ ನೀಡಬೇಕೆಂದು ವಿನಂತಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here