ಚಿತ್ತಾಪುರ: ತಾಲೂಕಿನ ಅಲ್ಲೂರ್(ಬಿ) ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯಬೇಕಾದ ದುರ್ಗಾದೇವಿಯ ಜಾತ್ರೆಯನ್ನು ರದ್ದುಮಾಡುವ ಮುನ್ನ ಗುರುವಾರ ಗ್ರಾಮದಲ್ಲಿ ಶಾಂತಿ ಸಭೆಯ ಆಯೋಜಿಸಲಾಗಿತ್ತು,
ಈಗಾಗಲೇ ಗ್ರಾಮದಲ್ಲಿ ಡಂಗುರ ಸಾರಿ ಜಾತ್ರೆ ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ, ಅಷ್ಟೇ ಅಲ್ಲದೆ ದೇವಸ್ಥಾನಕ್ಕೆ ಬೀಗ ಹಾಕಲಾಗಿದ್ದು, ಕಾನೂನು ಉಲ್ಲಂಘಿಸಿ ಜಾತ್ರೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ವೆಂಕನಗೌಡ ಪಾಟೀಲ್ ತಿಳಿಸಿದರು.
ಮೇ 12ರಂದು ನಡೆಯಬೇಕಾದ ದೇವಸ್ಥಾನದ ಜಾತ್ರೆಯ ನಿಮಿತ್ಯ ಅರ್ಚಕರು ಸೇರಿ ನಾಲ್ವರು ಮಾತ್ರ ದೇವಸ್ಥಾನದಲ್ಲಿ ಜಾತ್ರೆಯ ದಿನ ಪೂಜೆ ಮಾತ್ರ ಸಲ್ಲಿಸಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ತಹಸಿಲ್ದಾರ್ ಉಮಾಕಾಂತ್ ಹಳ್ಳೆ, ಡಾ,ಬಸಲಿಂಗಪ್ಪ ಡಿಗ್ಗಿ, ಪಿಎಸ್ಐ ಶ್ರೀಶೈಲ ಅಂಬಾಟಿ, ದೇವಸ್ಥಾನ ಸಮಿತಿ ಅಧ್ಯಕ್ಷ ನಿಂಗಣ್ಣ ಬಿಜಾಪುರ್, ಕಾರ್ಯದರ್ಶಿ ಶಂಕರ್ ಬಿಜಾಪುರ್, ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ನಾಟಿಕರ್, ಚಂದ್ರಶೇಖರ್ ಅವಂಟಿ, ಸೇರಿದಂತೆ ಇತರರಿದ್ದರು.