ಕಲಬುರಗಿಯಿಂದ ಬಿಹಾರ್ ರಾಜ್ಯಕ್ಕೆ ಕಾಲ್ನಡಿಗೆ ಮೂಲಕ ತೆರಳಿದ 28 ಮಿರ್ಚಿ ಗೋದಾಮ್ ಕಾರ್ಮಿಕರು

0
53

ಕಲಬುರಗಿ: ನಗರದ ಮಿರ್ಚಿ ಗೋದಾಮ್ ನಲ್ಲಿ ಕೆಲಸ ಮಾಡುತ್ತಿದ್ದ, ಬಿಹಾರ ಮೂಲದ 28ಕ್ಕೂ ಹೆಚ್ಚು ಕಾರ್ಮಿಕರು ಕಂಪನಿಯಿಂದ ಊಟ ಮತ್ತು ವೇತನ ಸಿಗದ ಕಾರಣ ಇಂದು ಮನನೊಂದು 2200 ಕಿ.ಮೀ ದೂರದಲ್ಲಿರುವ ಸ್ವರಾಜ್ಯವಾದ ಬಿಹಾರಗೆ ಕಾಲ್ನಡಿಗೆ ಮೂಲಕ ತೆರಳಲು ಪ್ರಯಾಣ ಬೆಳಸಿದ್ದಾರೆ.

ಇಲ್ಲಿನ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ 28ಕ್ಕೂ ಹೆಚ್ಚು ಕಾರ್ಮಿಕರು ಒಂದೇ ಕಡೆಯಲ್ಲಿ ಸೇರಿ ಕಾಲ್ನಡಿಗೆ ಪ್ರಯಾಣ ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕರು ನಾವು ಕಳೆದ ನಾಲ್ಕು ಐದು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಈ ಕುರಿತು ಭೇಟಿ ನೀಡಿ ಮನವಿ ಮಾಡುತ್ತಿದ್ದೇವೆ. ಆದರೆ ನಾಳೆ ಬನ್ನಿ ಎಂದು ಕಾಲ ಹರಣ ಮಾಡುತ್ತಿದ್ದಾರೆ. ನಮಗೆ ಊಟ ಮತ್ತು ಕೆಲಸ ವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಕಾರ್ಮಿಕರು ಡಿಸಿ ಕಚೇರಿಗೆ ಸಲ್ಲಿಸಿದ ಮನವಿ ಪತ್ರ ತೋರಿಸಿ ಅಳಲು ತೊಡಿಕೊಂಡಿದರು.

Contact Your\'s Advertisement; 9902492681

ಮಿರ್ಚಿ ಗೋದಾಮ್ ಕಂಪೆನಿಯಲ್ಲಿ ಸುಮಾರು 90 ಜನ ಬಿಹಾರದ ಮೂಲದವರು ಕೆಲಸ ಮಾಡುತ್ತಿದ್ದೇವೆ ನಮಗೆ ಗೋದಾಮ್ ನಿಂದ ಯಾವುದೇ ಊಟ ಮತ್ತು ವೇತನ ವ್ಯವಸ್ಥೆ ಮಾಡುತ್ತಿಲ್ಲ.

ಹಸಿವಿನಿಂದ ಮೃತಪಟುವ ಸನ್ನಿವೇಶ ನಿರ್ಮಾಣವಾಗಿದೆ ಆದರಿಂದ ನಾವು ಇಲ್ಲಿ ಸಾಯುವ ಕಿಂತ ನಮ್ಮ ಮನೆಯಲ್ಲಿ ಸಾಯಲು ಇಷ್ಟಪಡುತ್ತೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರಕಾರ ನಮಗೆ ನಮ್ಮ ಮನೆಗೆ ತಲುಪಿಸು ಕಾರ್ಯ ಮಾಡ್ಲಿ, ಇಲ್ಲಾಂದ್ರೆ ನಮಗೆ ಕಾಲ್ನಡಿಗೆ ಮೂಲಕ ನಮ್ಮ ರಾಜ್ಯಕ್ಕೆ ತೆರಳಲು ಅನುಮತಿ ಮಾಡಿಕೊಡಲಿ ಎಂದು ಸರಕಾರಕ್ಕೆ ಒತ್ತಾಯಿಸಿದರು.

ಸರಕಾರದಿಂದ ಸಾರಿಗೆ ಮತ್ತು ಇತರೆ ವ್ಯವಸ್ಥೆ ಆಗಿಲ್ಲ ಆದರಿಂದ ನಾವು ಕಾಲ್ನಡಿಗೆ ಮೂಲಕ ನಮ್ಮ ರಾಜ್ಯಕ್ಕೆ ಮರಳುತ್ತೇವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಗೋದಾಮ್ ಮಾಲೀಕರ ಬೇಜವಾಬ್ದಾರಿಯಿಂದ 90 ಜನರು ಬೀದಿಗೆ ಬಂದು ನರಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ ಮತ್ತು ಜಿಲ್ಲಾಡಳಿತ ಈ ಕಾರ್ಮಿಕರ ಬಗ್ಗೆ ಯಾವುದೇ ರೀತಿಯ ಸ್ಪಂದನೆ ಸಿಗದೇ ರೋಸಿ ಯಾವುದೇ ಸೂಕ್ತ ವ್ಯವಸ್ಥೆ ಮತ್ತು ಸೌಕರ್ಯವಿಲ್ಲದೇ ತಮ್ಮ ರಾಜ್ಯಕ್ಕೆ ಮರಳಲು ಪರದಾಡುವಂತಾಗಿದೆ.

ಇನ್ನೊಂದು ಕಡೆ ಗೋದಾಮ್ ಮಾಲೀಕರು ಇಂತಹ ವಿಪತು ಪರಿಸ್ಥಿತಿಯಲ್ಲಿ ನೆರೆ ರಾಜ್ಯದಿಂದ ಬಂದ ಕಾರ್ಮಿಕರ ಬಗ್ಗೆ ಕಾಳಜಿ ಬಹಿಸಬೇಕಿದ ಅವರ ರಾಜ್ಯಕ್ಕೆ ತಲುಪಿಸುವ ಮತ್ತು ಸೂಕ್ತ ವ್ಯವಸ್ಥೆ ಮತ್ತು ಕಾರ್ಮಿಕರಿಗೆ ಊಟ ಮತ್ತು ಅಗತ್ಯ ವಸ್ತುಗಳ ಪುರೈಕೆ ಮಾಡದಿರುವುದರಿಂದ 90 ಜನರ ಜೀವನ ಅತಂತ್ರಕ್ಕೆ ಸಿಲುಕಿದಂತಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here