ಚಿತ್ತಾಪುರ: ಕೊರೊನ್ ವೈರಸ್ ಹಿನ್ನಲೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ತೆಂಗಳಿ ಅವರು ಶುಕ್ರವಾರ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸುಮಾರು 50ಕ್ಕೂ ಹೆಚ್ಚು ದೇವದಾಸಿ ಮಹಿಳೆಯರಿಗೆ ಮಾಸ್ಕ್ ಗಳನ್ನು ವಿತರಿಸಿದರು.
ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ಮಾತನಾಡುತ್ತಾ ಅವಶ್ಯಕತೆ ಇದ್ದಾಗ ಮಾತ್ರ ಮನೆಯಿಂದ ಹೊರಗಡೆ ಬಂದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದು ದೇವದಾಸಿಯರಿಗೆ ಸಲಹೆ ನೀಡಿದರು.
ಈ ವೇಳೆಯಲ್ಲಿ ದೇವದಾಸಿ ಪುನರ್ವಸತಿ ನಿಗಮದ ಅಧಿಕಾರಿ ಎಸ್.ಎನ್ ಹಿರೇಮಠ್, ತಾಲೂಕು ಪಂಚಾಯಿತಿ ಇಓ ಅನಿತಾ ಪೂಜಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಹರಿನಾಥ್ ಚವ್ಹಾಣ, ಮಲ್ಲಿನಾಥ ಪೂಜಾರಿ, ನಾಗೇಶ್ ಬುರಬುರೆ, ವಿಶಾಲ್ ಟೇಲರ್, ಬಸವರಾಜ ಮೆಡಿಕಲ್, ಸೇರಿದಂತೆ ಇತರರಿದ್ದರು.