ಹೂವಿನ ಬೆಳಗಾರರಿಗೆ ನೀಡಿದ ಪರಿಹಾರ ಪುನರ್ ಪರಿಶೀಲಿಸಲಿ

0
41

ಮೊಳಕಾಲ್ಮೂರು: ಕೊರೋನಾದ ಕಷ್ಟಕಾಲದಲ್ಲಿ ಸರ್ಕಾರ ಹೂವಿನ ಬೆಳಗಾರರಿಗೆ ಗರಿಷ್ಠ 1 ಹೆಕ್ಟೇರ್‌ಗೆ 25 ಸಾವಿರ ರೂ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ ಸರ್ವೆ ನಡೆಸದೆ ಎಲ್ಲರಿಗೂ ಒಂದೇ ಎಂಬಂತೆ ಮಾಡಿರುವುದು ಕೈಬಿಟ್ಟು ಈಗ ನೀಡಿರುವ ಪರಿಹಾರದ ಕ್ರಮವನ್ನು ಪುನರ್ ಪರಿಶೀಲಿಸಲಿ ಎಂದು ಹೂವಿನ ಬೆಳಗಾರ ಧರ್ಮಣ್ಣ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಪಕ್ಕುರ್ತಿ ಗ್ರಾಮದ ಹೂವಿನ ಬೆಳೆಗಾರ ರೈತ ಧರ್ಮಣ್ಣನು ತನ್ನ 4ಎಕರೆ ತೋಟದಲ್ಲಿ ಕನಕಾಂಬರ ಹೂವು ಬೆಳೆದಿದ್ದರು. ಪ್ರತಿನಿತ್ಯ 50 ಕೆ.ಜಿ ಹೂವಿನಂತೆ ದಿನಕ್ಕೆ 10ಸಾವಿರ ಗಳಿಸುತ್ತಿದ್ದರು. ಆದರೆ ಕೊರೋನಾದಿಂದ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿದ್ದು, ಕಳೆದ ಒಂದೂವರೆ ತಿಂಗಳಿAದ ಒರೋಬ್ಬರಿ 5 ಲಕ್ಷ ರೂಪಾಯಿಗಳು ನಷ್ಟ ಅನುಭವಿಸಿದ್ದಾರೆ.

Contact Your\'s Advertisement; 9902492681

ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಸರ್ಕಾರ ಹೂವು ಬೆಳಗಾರರಿಗೆ ನಷ್ಟದ ಒಟ್ಟು ಮೊತ್ತದಲ್ಲಿ ಅರ್ಧದಷ್ಟಾದರೂ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಇದೀಗ ಸರ್ಕಾರ ಹೂವು ಬೆಳಗಾರರಿಗೆ 25ಸಾವಿರ ರೂಗಳು ಮಾತ್ರ ಪರಿಹಾರ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಸರ್ಕಾರ ಯಾವುದೇ ರೀತಿಯ ಸರ್ವೆ ನಡೆಸದೆ ಎಲ್ಲರಿಗೂ ಒಂದೇ ಎಂದಿರುವುದು ಯಾವ ಆಧಾರದಲ್ಲಿ? ಅವರು ನೀಡುವ ಹಣ ಔಷಧಿ ಅಂಗಡಿಗೂ ಸಹ ಸಾಲುವುದಿಲ್ಲ. ಈಗಾದರೆ ನಮ್ಮ ಜೀವನ ನಡೆಸುವುದು ಹೇಗೆ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೋನಾದಿಂದ ಪರದಾಡಬೇಕಾದ ಇಂತಹ ಆಪತ್ ಕಾಲದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು 1610ಕೋಟಿ ರೂಪಾಯಿಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸ್ವಾಗತಾರ್ಹ ವಿಷಯ. ಅದಕ್ಕೆ ಮುಖ್ಯಮಂತ್ರಿಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಆದರೆ ಹೂವು ಬೆಳಗಾರರು ಲಕ್ಷಾಂತರ ರೂಪಾಯಿಗಳು ನಷ್ಟ ಅನುಭವಿಸಿದ್ದಾರೆ. ಜೀವನ ನಡೆಸಲಾಗದೆ ಬದುಕು ಬೀದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೂವಿನ ಬೆಳೆಗಾರರ ಬೆಂಬಲಕ್ಕೆ ನಿಲ್ಲದೆ ಕೇವಲ ಎಲ್ಲರಿಗೂ ಒಂದೇ ಎಂದು 15ಸಾವಿರ ನೀಡಿರುವುದು ಎಷ್ಟರಮಟ್ಟಿಗೆ ಸರಿ?
ಲಕ್ಷಾಂತರ ರೂಪಾಯಿಗಳು ಸಾಲ ಮಾಡಿ ಬಂಡವಾಳ ಹೂಡಿ ಹೂವು ಬೆಳೆದಿದ್ದೆ. ಇದೀಗ ಕೊರೋನಾದಿಂದ 5ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ.

ಕೊರೋನಾ ಕಾಟಕ್ಕೆ 5ಲಕ್ಷ ನಷ್ಟ ಅನುಭವಿಸಿದ್ದೇನೆ. ಸರ್ಕಾರ ಮಾತ್ರ ಯಾವುದೇ ಸರ್ವೆ ಮಾಡಿಸದೆ ಕೇವಲ 25ಸಾವಿರ ಪರಿಹಾರ ನೀಡಿದೆ. ಇದರಿಂದ ಸಾಲ ಕಟ್ಟುವುದು ಹೇಗೆ, ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರ ಮತ್ತೊಮ್ಮೆ ಈ ವಿಚಾರದಲ್ಲಿ ಸರ್ವೆ ಮಾಡಿಸಿ ಪರಿಹಾರ ನೀಡಬೇಕೆಂಬುದು ನಮ್ಮ ಮನವಿಯಾಗಿದೆ. – ಧರ್ಮಣ್ಣ, ಹೂವು ಬೆಳಗಾರರು, ರೈತ.

ಪ್ರಸ್ತುತ ಸಾಲಗಾರರ ಕಾಟ ಹೆಚ್ಚಾಗಿದೆ, ಮತ್ತೊಂದೆಡೆ ಹೂವೆಲ್ಲಾ ಮಾರಾಟವಾಗದೆ ಗಿಡದಲ್ಲೇ ಬಾಡಿಹೋಗಿವೆ. ತೋಟದ ನಿರ್ವಹಣೆಯ ಸಮಸ್ಯೆ ಹೆಚ್ಚಾಗಿದೆ, ಇಂತಹ ಕಷ್ಟಕಾಲದಲ್ಲಿ ನಮ್ಮ ಕೈಹಿಡಿಯೂವವರು ಯಾರಿದ್ದಾರೆ. ಹೇಗೆ ಜೀವನ ನಡೆಸಬೇಕು ಎಂಬುದೇ ತಿಳಿಯದಂತಹ ಸಂದಿಗ್ಧ ಸ್ಥಿತಿಯಲ್ಲಿದ್ದೇವೆ. ಏನು ಮಾಡುವುದಕ್ಕೆ ಹಣ ಇಲ್ಲದಂತಾಗಿದೆ.

ಇದೇ ಸಂದರ್ಭದಲ್ಲಿ ತಿಳಿಸಲೇಬೇಕಾಗಿರುವ ಇನ್ನೊಂದು ಮುಖ್ಯ ಮಾಹಿತಿ ಎಂದರೆ ಕನಕಾಂಬರ ಹೂವು ಬೆಳೆಯಲು ಲಕ್ಷಾಂತರ ರೂ ಸಾಲ ಮಾಡಿದ್ದೆ. ಪ್ರತೀ ವರ್ಷವು ಬಡ್ಡಿಯನ್ನು ತಪ್ಪದೇ ಕಟ್ಟಿದ್ದೇನೆ. ಆದರೆ ಪ್ರಸ್ತುತ ಕೊರೋನಾದಿಂದ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇನೆ. ಇದನ್ನು ಸಹ ಅರ್ಥಮಾಡಿಕೊಳ್ಳದ ಕೆಲವರು ನನಗೆ ಸಾಲ ನೀಡಿದ್ದು ವಾಪಾಸ್ ನೀಡಿ ಎಂದು ಕೇಳುತ್ತಿದ್ದಾರೆ. ಈಗಾದರೆ ಏನು ಮಾಡುವುದು? ಒಬ್ಬ ರೈತನ ಪರಿಸ್ಥಿತಿ ಹೀಗಿರಬೇಕಾದರೆ ಇನ್ನು ರಾಜ್ಯದ ರೈತರ ಪರಿಸ್ಥಿತಿ ಹೇಗಿರಬೇಡ. ಆದ್ದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಅದೆಷ್ಟು ರೈತರು ಏನೇನು ಮಾಡಿಕೊಳ್ಳುತ್ತಾರೋ ತಿಳಿಯದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಲ ಮತ್ತು ಜೀವನ ನಿರ್ವಹಿಸಲು ಸಾಧ್ಯವಾಗದೇ ಇದ್ದು ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ತಿಳಿಸಿದರು. ರೈತರು ಸಾಯುವಂತಹ ಇಂತಹ ಸ್ಥಿತಿಯಲ್ಲಿಯೂ ಸಹ ಸರ್ಕಾರ ಕೇವಲ 25ಸಾವಿರ ನೀಡಿರುವುದು ಸರಿಯೇ? ಒಮ್ಮೆ ನೀವೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದರು.

ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡರೆ 5ಲಕ್ಷ ಕೊಟ್ಟು ಸುಮ್ಮನಾಗುತ್ತೀರಾ. ಆದರೆ ಪ್ರಸ್ತುತ ಕೊರೋನಾದಿಂದ ರೈತರು ಸಾಯುವ ಇಂತಹ ಸ್ಥಿತಿಯಲ್ಲಿ ಏಕೆ ಸಾಯದಂತೆ ತಡೆಯುವ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಶ್ನಿಸಿದರು. ಕೃಷಿ ಮಂತ್ರಿ ಬಿ.ಸಿ ಪಾಟೀಲ್ ಅವರಿಗೆ ಮಾಧ್ಯಮಗಳ ಮೂಲಕ ಕರೆಮಾಡಿ ಇದನ್ನೆಲ್ಲಾ ತಿಳಿಸಿದರೆ ಆಯ್ತು ನೋಡುತ್ತೇವೆ ಎಂದು ಹೇಳುತ್ತಾರೆ ವಿನಹ ಯಾರೂ ಕೂಡ ನೆರವಿಗೆ ಧಾವಿಸಿಲ್ಲ ಎಂದ ಬೇಸರ ವ್ಯಕ್ತಪಡಿಸಿದರು.

25 ಸಾವಿರದಲ್ಲಿ ಗೊಬ್ಬರ ಮತ್ತು ಔಷಧ ಅಂಗಡಿಗೆ ಕೊಡುವುದಕ್ಕೆ ಆಗ್ತಾ ಇಲ್ಲ ಆದರೆ ಸ್ವಲ್ಪ ಲಾಕ್ ಡೌನ್ ಸಡಿಲ ಮಾಡುವುದೇ ತಡ ಗೊಬ್ಬರ ಮತ್ತು ಔಷಧಿ ಅಂಗಡಿಯವರು ನನ್ನದು ಕೊಡು ನಿನ್ನದು ಕೊಡು ಎಂದು ಕೇಳುತ್ತಾರೆ, ಇವರು ಸಾಲ ನೀಡಿದವರು ಒಂದು ರೀತಿ ಬ್ರಿಟಿಷ್ ಸರ್ಕಾರದಂತೆ ಸಾಲ ಮರುಪಾವತಿಸಿ ಎಂದು ಕೇಳುತ್ತಲೇ ಇದ್ದಾರೆ, ಆದರೆ ಒಂದು ನಯಾ ಪೈಸೆಯು ಇಲ್ಲದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ನೀಡುವ 25 ಸಾವಿರದಿಂದ ಏನು ಮಾಡಲು ಸಾಧ್ಯ. ಅದನ್ನು ಯಾರಿಗೆ ಎಂದು ಕೊಡಬೇಕು. ಜೀವನ ಹೇಗೆ ನಡೆಸಬೇಕು ನೀವೆ ಹೇಳಿ ಎಂದು ಸರ್ಕಾರವನ್ನೇ ಕೇಳಿದರು.

ಸರ್ಕಾರ ಕೋಟ್ಯಾಂತರ ರೂಪಾಯಿಗಳಷ್ಟು ಸಾಲ ಮಾಡಿದ ಉದ್ಯಮಿಗಳ ಸಾಲವನ್ನು ಮನ್ನಾ ಮಾಡುತ್ತಾರೆ. ಆದರೆ ನಮ್ಮಂತಹ ರೈತರ ಕೈಹಿಡಿಯುವುದಿಲ್ಲ ಏಕೆ? ಇಂತಹ ಕಷ್ಟದ ಸಂದರ್ಭದಲ್ಲಿ ಅಂತಹ ಉದ್ಯಮಿಗಳಿಂದ ಹಣವನ್ನು ಕಾನೂನು ಕ್ರಮ ಜರುಗಿಸಿ ಹಣ ಜೋಡಿಸಲಿ ಎಂದರು.

ಯಾವುದೇ ಕಾರಣಕ್ಕೂ ಇದನ್ನು ಹೀಗೆ ಮುಂದುವರೆಸದೆ ಸರಿಯಾದ ಯೋಜನೆಯಿಂದ ಸರ್ವೇ ಮಾಡಿಸಿ ತೋಟಗಾರಿಕೆಯಿಂದ ಒಂದೇ ಎಕರೆ ಇರಲಿ ಐದು ಎಕರೆ ಇರಲಿ ಅದು ಎಲ್ಲರಿಗೂ ಮೊದಲು 25.000 ರೂ ತಿದ್ದುಪಡಿಮಾಡಿ ಅವರಿಗೆ ಉಂಟಾದ ನಷ್ಟದ ಪ್ರಮಾಣದಲ್ಲಿ ಅರ್ಧದಷ್ಟಾದರೂ, ಅಥವಾ ಕಾಲು ಭಾಗವಾದರು ಪರಿಹಾರ ನೀಡಿ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರಲ್ಲಿ ಮನವಿ ಮಾಡುತ್ತಿದ್ದೇವೆ ಎಂದರು.

  • ಪ್ರಭಾಕರ.ಪಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here