ಸರಣಿ ಟ್ವಿಟ್ ಮೂಲಕ ಕಾರ್ಮಿಕರ ಸಮಸ್ಯೆಯ ಕುರಿತು ಸರಕಾರ, ಸಂಸದರನ್ನು ಎಚ್ಚರಿಸಿದ ಕೈಪಕ್ಷದ ಶಾಸಕ

0
76

ಕಲಬುರಗಿ: ಲಾಕ್ ಡೌನ್ ಹಿನ್ನೆಯಲ್ಲಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಅದರಲ್ಲೂ ಕಲಬುರಗಿ ಜಿಲ್ಲೆಯ ಕೂಲಿ ಕಾರ್ಮಿಕರನ್ನು ವಾಪಸ್ ಜಿಲ್ಲೆಗೆ ತರುವಂತೆ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸರಕಾರಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು.

ಹಾಗೆ ಕರೆತರುವ ಕಾರ್ಮಿಕರ ಸಾರಿಗೆ ವೆಚ್ಚವನ್ನು ಕಾಂಗ್ರೆಸ್ ವತಿಯಿಂದ ಭರಿಸುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಹಾಗೂ ಎಂಡಿ NEKRTC ಅವರಿಗೆ ಪತ್ರ ಬರೆದು ಈ ಕೂಡಲೇ ಮಹಾರಾಷ್ಟ್ರ ಹಾಗೂ ಆಂದ್ರಪ್ರದೇಶಕ್ಕೆ ನೂರು ಬಸ್ ಮತ್ತು ಗೋವಾ ಹಾಗೂ ತೆಲಂಗಾಣಕ್ಕೆ ಐವತ್ತು ಬಸ್ ಬಿಡುವಂತೆ ಆಗ್ರಹಿಸಿದ್ದರು.

Contact Your\'s Advertisement; 9902492681

ಈ ಹಿನ್ನೆಲೆಯಲ್ಲಿ NEKRTC ಎಂಡಿ ಅವರು ಜಿಲ್ಲಾಧಿಕಾರಿ ಕಲಬುರಗಿ ಅವರಿಗೆ ನಿರ್ದೇಶನ‌ ನೀಡುವಂತೆ ಕೋರಿ ಪತ್ರ ಬರೆದಿದ್ದಾರೆ. ಸದರಿ ಪತ್ರವನ್ನು ತಮ್ಮ ಟ್ವಿಟರ್ ನಲ್ಲಿ ನಮೂದಿಸಿರುವ ಶಾಸಕರು‌ ತಾವು ಬರೆದ ಪತ್ರಕ್ಕೆ ಸರಕಾರ ಹಾಗೂ ಎಂಡಿ NEKRTC ಅವರ ಮನವಿಗೆ ಸ್ಪಂದಿಸುವಂತೆ ಅವರು ಆಗ್ರಹಿಸಿದ್ದಾರೆ.

ಈ ನಡುವೆ ಮತ್ತೊಂದು ಟ್ವಿಟ್ ಮಾಡಿರುವ ಶಾಸಕರು, ಸಂಸದರಾದ ಉಮೇಶ್ ಜಾಧವ್ ಅವರನ್ನು ಉದ್ದೇಶಿಸಿ ಕಾರ್ಮಿಕರನ್ನು ವಾಪಸ್ ಕರೆತರುವ ವಿಚಾರಕ್ಕೆ‌ ಸಂಬಂಧಿಸಿದಂತೆ  ತಮಗೆ ಸಹಾಯ ಮಾಡುವಂತೆಯೂ ಅವರು ಕೋರಿದ್ದಾರೆ.

ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ ಕೂಡಾ ವಲಸೆ ಹೋಗಿರುವ ಕಲಬುರಗಿ ಜಿಲ್ಲೆಯ ಕಾರ್ಮಿಕರನ್ನು ವಾಪಸ್ ಕರೆ ತರುವಲ್ಲಿ ಆಗುತ್ತಿರುವ ವಿಳಂಬ ಕುರಿತು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ  ಪ್ರಿಯಾಂಕ್ ಖರ್ಗೆ ಅವರೇ ಸ್ವತಃ ಸರಕಾರಕ್ಕೆ ಹಾಗೂ NEKRTC ಎಂ ಡಿ ಅವರಿಗೆ ಪತ್ರ ಬರೆದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಗೋವಾ ರಾಜ್ಯಗಳಲ್ಲಿ ಸಿಲುಕಿರುಗ ಕೂಲಿ ಕಾರ್ಮಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಬಸ್ ಗಳ ಮೂಲಕ ಕರೆದು‌ ತರುವಂತೆ ಹಾಗೂ ಸಾರಿಗೆ ವೆಚ್ಚವನ್ನು ಕೆಪಿಸಿಸಿ ವತಿಯಿಂದ ಭರಿಸಲಾಗುವುದು ಎಂದು ಕೈ ಶಾಸಕರು ತಮ್ಮ ಪತ್ರದಲ್ಲಿ‌ ಉಲ್ಲೇಖಿಸಿದ್ದನ್ನು ಸ್ಮರಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here