ಗುತ್ತಿಗೆ ಕಾರ್ಮಿಕರ ವೇತನ ತಾರತಮ್ಯ ಜೈ ಕನ್ನಡಿಗರ ಸೇನೆ ಆಗ್ರಹ

0
55

ಚಿತ್ತಾಪುರ: ತಾಲೂಕಿನ ವಾಡಿ ಎಸಿಸಿ ಹಾಗೂ ಇತರೆ ಸಿಮೆಂಟ್ ಕಾರ್ಖಾನೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ವೇತನ ತಾರತಮ್ಯ ಮಾಡುತ್ತಿರುವುದು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನ ಗ್ರೇಡ್ 2 ತಹಸೀಲ್ದಾರ್ ರವೀಂದ್ರ ಧಾಮಾ ಅವರ ಮುಖಾಂತರ ಜೈ ಕನ್ನಡಿಗರ ಸೇನೆ ಮನವಿ ಸಲ್ಲಿಸಿದರು.

ಕೊರೊನ್ ವೈರಸ್ ಹಿನ್ನೆಲೆ ನಿಷೇಧಾಜ್ಞೆಯ ಷರತ್ತುಬದ್ಧ ಆಧಾರದ ಮೇಲೆ ಸಿಮೆಂಟ್ ಕಾರ್ಖಾನೆಗಳು ಪುನರಾರಂಭ ಕಾರ್ಯ ಪ್ರಾರಂಭವಾಗಿರುತ್ತದೆ, ಆದರೆ ಎಪ್ರಿಲ್ ತಿಂಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ 26 ದಿನಗಳ ವೇತನ ಮಂಜೂರು ಮಾಡಿದರೆ ಇನ್ನೂ ಕೆಲ ಕಾರ್ಮಿಕರಿಗೆ ಕೇವಲ ಮೂರರಿಂದ ನಾಲ್ಕು ದಿನಗಳ ವೇತನ ಮಂಜೂರು ಮಾಡಿರುತ್ತಾರೆ ಇಂತಹ ತಾರತಮ್ಯ ನಡೆಯುತ್ತಿದ್ದು ಕೂಡಲೇ ಜಿಲ್ಲೆಯ ಎಲ್ಲಾ ಕಾರ್ಖಾನೆಯ ಕಾರ್ಮಿಕರಿಗೆ ಕನಿಷ್ಠ 20 ದಿನಗಳ ವೇತನ ಮಂಜೂರು ಮಾಡಲು ಕಾರ್ಖಾನೆಯ ಆಡಳಿತ ಮಂಡಳಿಗೆ ಆದೇಶಿಸಬೇಕು, ಕಾರ್ಮಿಕರ ಜೀವ ಉಳಿಸಬೇಕು, ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಜೈ ಕನ್ನಡಿಗರ ಸೇನೆಯ ವಾಡಿ ವಲಯಾಧ್ಯಕ್ಷ ಯುವರಾಜ ರಾಠೋಡ್, ರಂಜಿತ್ ಚವಾಣ್, ಸಂತೋಷ್ ಪವಾರ್, ಕೈಲಾಸ್ ರಾಠೋಡ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here