ಕಲಬುರಗಿ: ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ರಾಜ್ಯಪಾಲ ಮತ್ತು ರಾಷ್ಟಪತಿಗಳಿಂದಲೂ ಪದಕ ಹಾಗೂ ಪ್ರಶಸ್ತಿ ಪಡೆದ ಹಟಗಾರ ಸಮಾಜದ ಧೀಮಂತ ನಾಯಕರಾದ ಆರ್. ಸಿ. ಘಾಳೆ ಅವರ 78ನೇ ಜನ್ಮದಿನ ಇಂದು ಅವರ ಮನೆಗೆ ತೆರಳಿ ಫ.ಗು.ಹಳ್ಳಕಟ್ಟಿ ಯವರ ಭಾವಚಿತ್ರಕ್ಕೆ ಶಾಲು ಮತ್ತು ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಯಿತು.
ಈ ವೇಳೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಯುವ ಸಂಚಾಲಕರು ಹಾಗೂ ವಚನೋತ್ಸವ ಸಮಿತಿಯ ಯುವ ಘಟಕದ ಅಧ್ಯಕ್ಷ ರಾದ ಶಿವರಾಜ್ ಅಂಡಗಿ ಮಾತನಾಡಿ, ಜಿಲ್ಲೆಯ ನೇಕಾರ ಸಮುದಾಯದ ಹಟಗಾರ ಜನಾಂಗದ ವ್ಯಕ್ತಿ ರಾಜ್ಯದಲ್ಲಿ ಸಮಾಜ ಸಂಘಟನೆ ಸಂಸ್ಥಾಪಕರು ಮತ್ತು ನಿವೃತ್ತ ಹೆಮ್ಮೆಯ ಪೋಲೀಸ್ ಅಧಿಕಾರಿ ಹಾಗೂ ನಮ್ಮ ಗುಲ್ಬರ್ಗಾ ಕ್ಲಬ್ ನ ಮಾಜಿ ಉಪಾಧ್ಯಕ್ಷ ಮತ್ತು ಬಸವೇಶ್ವರ ಬಡಾವಣೆಯ ಹಿರಿಯ ಮಾರ್ಗದರ್ಶಕರಾದ ಆರ್. ಸಿ. ಘಾಳೆ ಯವರ ಜನ್ಮದಿನದಂದು ಗೌರವಿಸಲು ಹೆಮ್ಮೆಯಾಗುತ್ತಿದೆ ಎಂದು ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಮಹದೇವಪ್ಪ ಘಾಳೆ, ತಂದೆಯವರ ಜನ್ಮದಿನಕ್ಕೆ ಶುಭ ಕೋರಿದ ಎಲ್ಲಾ ಬಂಧು ಮಿತ್ರರಿಗೆ ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ರಾಮಲಿಂಗ ಚೌಡೇಶ್ವರಿ ಸೇವಾ ಸಮಿತಿಯ ಕಾರ್ಯದರ್ಶಿ ವಿನೋದ ಕುಮಾರ ಜೇನವೇರಿ, ಶರಣ ಪ್ರಸಾದ ಜೇ. ಕಲ್ಯಾಣ ಕುಮಾರ ರಟಕಲ್ ಇದ್ದರು.