ಕಲಬುರಗಿ: ಜಿಲ್ಲಾ ನೇಕಾರ ಕುರ್ವಿನಶೆಟ್ಟಿ ಸಮಾಜದ ವತಿಯಿಂದ ಇಂದು ಸಂಜೆ ಹಟಗಾರ ಸಮಾಜದ ಸಂಸ್ಥಾಪಕ ಆರ್.ಸಿ. ಘಾಳೆ ಯವರ 78ನೇ ಜನ್ಮದಿನಾಚಾರಣೆ ಆಚರಿಸಲಾಯಿತು.
ಜಿಲ್ಲಾ ಸಮಾಜದ ಅಧ್ಯಕ್ಷ ಆಣ್ಣಾ ರಾಯ, ಈ. ಕುಣಕೇರಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮ್ಯಾಳಗಿ, ರಾ. ಚೌಡೇಶ್ವರಿ ಸೇವಾ ಸಮಿತಿಯ ನ್ಯಾಯವಾದಿ ವಿನೋದ್ ಜೆ, ಕೂಡಿ ಶ್ರೀಘಾಳೆ ಯವರ ಮನೆಗೆ ತೆರಳಿ ನೇಕಾರ ಸಮುದಾಯದ ಪ್ರಗತಿಗೆ ಮಾರ್ಗದರ್ಶನ ನೀಡುವಂತಹ ಕಾರ್ಯಮಾಡಲಿ ಎಂದು ಶುಭಕೋರಿದರು.
ಹಟಗಾರ ಮಸಮಾಜದ ರಾಜ್ಯ ಕಾರ್ಯದರ್ಶಿ ಹಾಗೂ ನಗರ ನೇಕಾರ ಬಿಜೆಪಿ ಸಂಚಾಲಕರಾದ ವಿನೋದ ಕುಮಾರ ಜೇನ್ವೇರಿ ಉಪಸ್ಥಿತರಿದ್ದರು, ಚೇತನ ಎಂ. ಘಾಳೆ ವಂದಿಸಿದರು.