ಹಾವು ಕಚ್ಚಿದ ಬಾಲಕಿ ಸಾವು: ಜಿಮ್ಸ್ ವೈದ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಶಾಸಕ ಖರ್ಗೆ ಆಗ್ರಹ

0
87

ಕಲಬುರಗಿ: ಹಾವು ಕಚ್ಚಿದ ಬಾಲಕಿಗೆ ಜಿಮ್ಸ್ ವೈದ್ಯಾಧಿಕಾರಿಗಳು ಅಗತ್ಯ ಚಿಕಿತ್ಸೆ ನೀಡದೆ ಹಾಗೂ ಗೊತ್ತುಪಡಿಸಿದ ಆಸ್ಪತ್ರೆಯ ಮಾಹಿತಿ ನೀಡದೆ ವಿಳಂಬ ನೀತಿ ಅನುಸರಿಸಿದ್ದರಿಂದ ಬಾಲಕಿ ಸಾವನ್ನಪ್ಪಿರುವ ಆರೋಪಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರಿಗೆ ಶಾಸಕರಾದ ಪ್ರಿಯಾಂಕ್ ಖರ್ಗೆ ಪತ್ರ.

ಚಿತ್ತಾಪುರ ಪಟ್ಟಣದ ಬಾಹರ್ ಪೇಠ ಬಡಾವಣೆಯ ನಿವಾಸಿ ಶೇಖ್ ಇಸ್ಮಾಯಿಲ್ ಅವರ ಪುತ್ರಿ ೧೨ ವರ್ಷದ ಕುಮಾರಿ ಆಶೀಯಾ ಬೇಗಂ ಅವರಿಗೆ ಮೇ ೮ ರಂದು ಹಾವು ಕಚ್ಚಿದ್ದರಿಂದ ತಕ್ಷಣವೇ ತಾಲೂಕು ಆಸ್ಪತ್ರೆಗೆ ಕರೆತರಲಾಗಿದೆ. ತುರ್ತು‌ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಬಾಲಕಿಯನ್ನು ಕಲಬುರಗಿ ಯ ಜಿಮ್ಸ್ ಗೆ ರವಾನಿಸಲಾಗಿದೆ. ಅಲ್ಲಿನ ವೈದ್ಯಾಧಿಕಾರಿಗಳು ಜಿಮ್ಸ್ ಆಸ್ಪತ್ರೆ ಕೇವಲ ಕೊವಿಡ್ ೧೯ ಸೋಂಕಿನ ರೋಗಿಗಳಿಗೆ ಮಾತ್ರ ಮೀಸಲಾಗಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಆದರೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಬಾಲಕಿಯ ಆರೋಗ್ಯದ ಗಂಭೀರತೆಯನ್ನು ಅರಿಯದ ಜಿಮ್ಸ್ ವೈದ್ಯಾಧಿಕಾರಿಗಳು ನಾನ್ ಕೋವಿಡ್ ರೋಗಿಗಳಿಗಾಗಿ ನಿಗದಿಪಡಿಸಿದ ಆಸ್ಪತ್ರೆಯ ಮಾಹಿತಿಯನ್ನು ತಕ್ಷಣ ನೀಡಿ ಅಲ್ಲಿಗೆ ಕಳಿಸದೆ ವಿಳಂಬ ತೋರಿ ಕೊನೆಗೆ ಸಂಗಮೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು, ಅಷ್ಟೊತ್ತಿಗಾಗಲೇ ತಡವಾಗಿದ್ದರಿಂದ ಬಾಲಕಿ‌ ಮಾರ್ಗಮಧ್ಯೆದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಶಾಸಕ ಖರ್ಗೆ ಪತ್ರದಲ್ಲಿ ವಿವರಿಸಿದ್ದಾರೆ.

ಜೊತೆಗೆ ವಿವರಣೆ ಪತ್ರದಲ್ಲಿ ರೋಗಿಯ ಹೆಸರು, ಈ ಹಿಂದೆ‌ ಚಿಕಿತ್ಸೆ ನೀಡಿದ ವೈದ್ಯರ ಹೆಸರು ಹಾಗೂ ವಿವರದ ಮಾಹಿತಿಯನ್ನೂ ಕೂಡಾ ನೀಡಿಲ್ಲ. ಇದನ್ನು ಗಮನಿಸಿದರೆ ಸದರಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ.

ಜಿಮ್ಸ್ ಆಸ್ಪತ್ರೆಯನ್ನು ಕೋವಿಡ್ ೧೯ ರೋಗಿಗಳಿಗೆ ಮೀಸಲಿಟ್ಟಿರುವ ನೆಪ ಮಾಡಿಕೊಂಡು ನಾನ್ ಕೋವಿಡ್ ರೋಗಿಗಳ ಬಗ್ಗೆ ನಿರ್ಲಕ್ಷ್ಯತನ ತೋರುತ್ತಿರುವ ಪ್ರಕರಣಗಳು ಇತ್ತೀಚಿಗೆ ವರದಿಯಾಗುತ್ತಿವೆ. ನಾನ್ ಕೋವಿಡ್ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದ ಜಿಮ್ಸ್ ವೈದ್ಯಾಧಿಕಾರಿಗಳು ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here