ಸುರಪುರ: ಗ್ರಾಮೀಣ ಕೂಟ ಫೈನಾನ್ಸ್ ವತಿಯಿಂದ ನಗರದ ಪೊಲೀಸ್ ಠಾಣೆಯಲ್ಲಿನ ಆರಕ್ಷಕ ನಿರೀಕ್ಷಕರು ಸೇರಿ ಎಲ್ಲಾ ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಪಿಐ ಎಸ್.ಎಂ.ಪಾಟೀಲ್ ಮಾತನಾಡಿ,ಇಂದು ಕೊರೊನಾ ವೈರಸ್ ಜಗತ್ತನ್ನೆ ನಡುಗಿಸಿದೆ.ಇದರಿಂದ ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಅಲ್ಲದೆ ಈ ವೈರಸ್ ನಿರ್ಮೂಲನೆಗಾಗಿ ಅನೇಕ ಇಲಾಖೆಯವರು ಹಗಲಿರಳು ಸೇವೆ ಸಲ್ಲಿಸುತ್ತಿದ್ದಾರೆ.ಇದನ್ನು ಅರಿತು ಇಂದು ಗ್ರಾಮೀಣ ಕೂಟ ಹಣಕಾಸು ಸಂಸ್ಥೆಯವರು ನಮ್ಮ ಪೊಲೀಸ್ ಇಲಾಖೆಯ ಸೇವೆಯನ್ನು ಗೌರವಿಸಿ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡುವ ಮೂಲಕ ಗೌರವಿಸಿರುವುದು ಸಂತೋಷ ಮೂಡಿಸಿದೆ ಎಂದರು.
ಸಂಸ್ಥೆಯ ಏರಿಯಾ ಮ್ಯಾನೆಜರ್ ಪ್ರಕಾಶ ಹೆಚ್.ಕೆ ಮಾತನಾಡಿ,ಇಂದು ನಾವೆಲ್ಲರು ಆರಾಮವಾಗಿರಲು ಮುಖ್ಯವಾಗಿ ವೈದ್ಯರು ಮತ್ತು ಪೊಲೀಸ್ ಇಲಾಖೆಯ ಸೇವೆ ಅತ್ಯಮೂಲ್ಯವಾದುದಾಗಿದೆ.ಪೊಲೀಸ್ ಇಲಾಖೆಯವರು ಹಗಲಿರಳೆನ್ನದೆ ಕರ್ತವ್ಯ ನಿರ್ವಹಿಸುವ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾರೆ.ಆದ್ದರಿಂದ ಪೊಲೀಸ್ ಸೇವೆಯನ್ನು ನಾವೆಲ್ಲರು ಇಂದು ನಿತ್ಯವು ಸ್ಮರಿಸಬೇಕಿದೆ.ಪೊಲೀಸ್ ಇಲಾಖೆಯ ಸೇವೆಗೆ ನಾವು ಗೌರವಾರ್ಥವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಿಸುವ ಮೂಲಕ ಗೌರವಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಶಾಖೆ ವ್ಯವಸ್ಥಾಪಕ ತುಳಜಾರಾಮ್ ಸಿಂಗ್ ರಜಪೂತ್, ಈರಣ್ಣ, ಉಮೇಶ, ರಾಜೇಂದ್ರ ಹಾಗು ಪೊಲೀಸ್ ಸಿಬ್ಬಂದಿಗಳಾದ ಬಸವರಾಜ ಮುದಗಲ್,ಶರಣಗೌಡ ಪಾಟೀಲ್,ಮನೋಹರ ರಾಠೋಡ್,ಮಹಾಂತೇಶ ಬಿರಾದಾರ್ ಸೇರಿದಂತೆ ಅನೇಕರಿದ್ದರು.
Thank you sir