ಕಲಬುರಗಿ: ಕಳೆದ ಐದು ವರ್ಷಗಳ ಹವಮಾನ ಸನ್ನಿವೇಶಗಳು ಹಾಗೂ ಪ್ರಸ್ತುತ ಈ ವರ್ಷದ ಹವಮಾನ ಸನ್ನಿವೇಶ ಕೃಷಿ ಬೆಳೆಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂದು ಗ್ರಾಮ ಮಟ್ಟದಲ್ಲಿ ಅದ್ಯಯನ ನಡೆಸಲು ಹೈದ್ರಾಬಾದನಲ್ಲಿರುವ ಕೇಂದ್ರೀಯ ಒಣ ಭೂಮಿ ಸಂಶೋಧನಾ ಕೇಂದ್ರ, ಕ್ರೀಡಾ ಸಂಸ್ಥೆ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಐಸಿಎಆರ್-ಕೆವಿಕೆ, ಕಲಬುರಗಿ ವತಿಯಿಂದ ಅದ್ಯಯನ ಹಮ್ಮಿಕೊಳ್ಳಲಾಗಿದೆ ಎಂದು ಕೆವಿಕೆ ವಿಜ್ಞಾನಿಗಳಾದ ಡಾ. ಜಹೀರ ಅಹಮದ್ ರೈತರಿಗೆ ಮಾಹಿತಿ ನೀಡಿದರು.
ಅತಿ ಉಷ್ಣತೆಯ ಬೇಸಿಗೆಯ ದಿನಗಳು ಈ ವರ್ಷ ಕಡಿಮೆ ಇದ್ದು, ಆಗಾಗ್ಗೆ ಬೀಸುತ್ತಿರುವ ಬಿರುಗಾಳಿ ಮಳೆ, ಭೂಮಿಯ ತೇವಾಂಶ, ಮೋಡದ ದಿನಗಳು, ಆದ್ರ್ರತೆ, ರೈತರು ಬೆಳೆದ ಬೆಳೆÉ, ಮುಂದೆ ಮುಂಗಾರು ಮತ್ತು ಹಿಂಗಾರು ಬೆಳೆಯ ಅದ್ಯಯನವನ್ನು ಬೇಸಿಗೆ, ಮಳೆಗಾಲ ಹಾಗೂ ಚಳಿಸನ್ನಿವೇಶದಲ್ಲಿ ಮಾಡಲಾಗುವುದು. ವಿವಿಧ ಮಣ್ಣಿನಲ್ಲಿ ತೇವಾಂಶ ಅಂಶವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ರೇಷ್ಮೆ ಕೃಷಿ, ಲಿಂಬೆ, ದ್ವಿದಳ ದಾನ್ಯ, ಎಣ್ಣೆಕಾಳು, ತೋಟಗಾರಿಕಾ ಬೆಳೆಗಳ ಕೀಟ ರೋಗಗಳ ಹತೋಟಿ ಕ್ರಮಗಳ ಕುರಿತು ರೈತೆರಿಗೆ ಮುನ್ನೆಚ್ಚರಿಕೆ ನೀಡಲಾಗುವುದು.
ಭೂಮಿಯ ಫಲವತ್ತತೆ ಕಾಪಾಡಿಕೊಂಡು, ಬೀಜ ಬೀಜೋಪಚಾರ ಮಾಡಿ, ಹೊಲದ ತೇವಾಂಶ ನೋಡಿ ಬಿತ್ತನೆ ಮಾಡಲು ಸೂಚಿಸಲಾಗಿದೆ. ಕೃಷಿ ಹೊಂಡದ ಸುತ್ತಲಿನ ಪ್ರದೇಶವನು ಅಲ್ಪಮಟ್ಟದಲ್ಲಿ ಸಾಮಾಜಿಕ ಅರಣ್ಯ ಅಥವ ಮಗ್ಗೆ ಕೃಷಿ ಕೈಗೊಳ್ಳಬಹುದಾಗಿದೆ.
ಮೇಳಕುಂದಾ (ಬಿ) ಗ್ರಾಮದ ರೈತರು ಉಪಸ್ಥಿತರಿದ್ದರು. ಔಷಧಿ ಸಿಂಪರಣೆ ವೇಳೆ ಸುರಕ್ಷಿತವಾಗಿ ಹಾಗೂ ಗಾಳಿಯ ದಿಕ್ಕು ನೋಡಿ ಅಗತ್ಯವಿದ್ದರೆ ಮಾತ್ರ ಸಿಂಪಡಿಸಲು ಸಲಹೆ ನೀಡಲಾಯಿತು. ಪರಿಸರ ಸ್ನೇಹಿ ಕೃಷಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿ ನಿಕ್ರಾ ಹವಮಾನ ಸಹ ಸಂಶೋಧಕರಾದ ಡಾ. ಮಹೇಶ ಪಾಟೀಲ್ ರವರು ತಿಳಿಸಿದರು.