ಚಿತ್ತಾಪುರ: ತಾಲೂಕಿಗೆ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬಂದ ಕೊರೊನ್ ವೈರಸ್ ಮುಂಜಾಗ್ರತ ಕ್ರಮವಾಗಿ ಜನರಿಗೆ ಕ್ವಾರಂಟೈನ್ ಗಾಗಿ ಚಿತ್ತಾಪುರ ಹೋಬಳಿಯಲ್ಲಿ 15 ಗುಂಡಗುರ್ತಿಯಲ್ಲಿ 6 ಮತ್ತು ನಾಲವಾರ ಹೋಬಳಿಯಲ್ಲಿ 14 ಸ್ಥಳಗಳನ್ನು ಸೇರಿದಂತೆ ಒಟ್ಟು 35 ಸ್ಥಳಗಳಲ್ಲಿ 2,069 ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಹಸಿಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದರು.
ಮೇ 6 ರಿಂದ 13 ರವರೆಗೆ 1,112 ಗಂಡು 957 ಹೆಣ್ಣು ಸೇರಿ ಒಟ್ಟು 2,069 ವಲಸೆ ಕಾರ್ಮಿಕರು ತಾಲೂಕಿಗೆ ಆಗಮಿಸಿದ್ದು.
ಚಿತ್ತಾಪುರ್ ಹೋಬಳಿ: ಮುರಾರ್ಜಿ ದೇಸಾಯಿ ವಸತಿ ನಿಲಯ, ಅಲ್ಪಸಂಖ್ಯಾತರ ವಸತಿ ನಿಲಯ ಹಿಂದುಳಿದ ವರ್ಗಗಳ ವಸತಿ ನಿಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವೇಶ್ವರ ಕಲ್ಯಾಣ ಮಂಟಪ, ಬಜಾಜ್ ಕಲ್ಯಾಣ್ ಮಂಟಪ, ಕಿಂಗ್ ಪ್ಯಾಲೇಸ್ ಫಂಕ್ಷನ್ ಹಾಲ್, ಎ-1 ಫಂಕ್ಷನ್ ಹಾಲ್, ವಸತಿ ನಿಲಯ ರಾವೂರ, ಗಂಗಾ ಪರಮೇಶ್ವರಿ ಮಹಾವಿದ್ಯಾಲಯ, ಡಿಎವಿ ಶಾಲೆ ಓರಿಯಂಟ್ ಸಿಮೆಂಟ್,ಸರ್ಕಾರಿ ಪ್ರೌಢಶಾಲೆ ಡಿಗ್ಗಾಂವ್, ಸರ್ಕಾರಿ ಪ್ರೌಢಶಾಲೆ ಸಾತನೂರ, ಆದರ್ಶ ವಿದ್ಯಾಲಯ ಕರದಾಳ, ಸರ್ಕಾರಿ ಪ್ರೌಢಶಾಲೆ ಕರದಾಳ,
ಗುಂಡಗುರ್ತಿ ಹೋಬಳಿ: ಮುರಾರ್ಜಿ ದೇಸಾಯಿ ವಸತಿ ನಿಲಯ ಗುಂಡುಗುರ್ತಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಗುಂಡಗುರ್ತಿ, ಹಿಂದುಳಿದ ವರ್ಗಗಳ ವಸತಿ ನಿಲಯ ದಂಡೋತಿ, ಮುರಾರ್ಜಿ ದೇಸಾಯಿ ವಸತಿ ನಿಲಯ, ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಮಾಡಬೂಳ, ಸರ್ಕಾರಿ ಪ್ರೌಢಶಾಲೆ ಮುಗುಳನಾಗಾಂವ್,
ನಾಲವಾರ ಹೋಬಳಿ: ಏಕಲವ್ಯ ವಸತಿ ನಿಲಯ ಕೊಂಚೂರು, ಹಿಂದುಳಿದ ವರ್ಗಗಳ ವಸತಿ ನಿಲಯ ಕೊಲ್ಲೂರು, ಸರ್ಕಾರಿ ಪ್ರೌಢಶಾಲೆಯ ಕೊಲ್ಲೂರು, ಸರ್ಕಾರಿ ಪ್ರೌಢಶಾಲೆಯ ನಾಲವಾರ, ಸರ್ಕಾರಿ ಉರ್ದು ಪ್ರೌಢಶಾಲೆ ನಾಲವಾರ, ಪದವಿಪೂರ್ವ ಕಾಲೇಜು ಸೇರಿದಂತೆ ಇತರ ಕಡೆಗಳಲ್ಲಿ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಗಂಡು ಮಕ್ಕಳ ವಸತಿ ನಿಲಯಕ್ಕೆ ಭೇಟಿ ನೀಡಿದ ತಹಸಿಲ್ದಾರ್ ಉಮಾಕಾಂತ ಹಳ್ಳೆ ಹಾಗೂ ನೋಡಲ್ ಅಧಿಕಾರಿ ಸಿಡಿಪಿಓ ರಾಜಕುಮಾರ್ ರಾಠೋಡ್ ಮಾಹಿತಿ ನೀಡಿದರು.