ಚಿತ್ತಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗಾಗಿ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವಂತೆ ಮಾಡಬೂಳ ಪಂಚಾಯತ್ ಪಿಡಿಒ ಶಿಲ್ಪ ಕೆ, ಗುಂಡುಗುರ್ತಿ ಪಂಚಾಯತ್ ಪಿಡಿಒ ಸುನೀತಾ ಶೃಂಗೇರಿ, ಅವರಿಗೆ 1,000 ಮಾಸ್ಕ್ ಗಳು ಹಾಗೂ ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರಿಗೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಸಿಡಿಪಿಓ ರಾಜಕುಮಾರ್ ರಾಠೋಡ್ ಮಾನವೀಯತೆ ಮೆರೆದಿದ್ದಾರೆ.