ಕಲಬುರಗಿ: ಲಾಕ್ ಡೌನ್ ಯಿಂದ ಕಂಗಾಲಾದ ಬಡ ಮತು ಮಧ್ಯಮ ವರ್ಗದ ಕಾರ್ಮಿಕರು ಮತ್ತು ಶ್ರಮಿಕರಿಗೆ ವಿಧಾನ ಪರಿಷತ್ ಸದಸ್ಯ ತೀಪ್ಪಣ್ಣ ಕಮಕನೂರ್ ಅವರ ನೇತೃತ್ವದಲ್ಲಿ ಡಾ. ಮಹಮ್ಮದ್ ಅಜಗರ್ ಚುಲಬುಲ್ ಅವರು ಮೂರನೇ ಸುತ್ತಿನ ಪಡಿತರ ಆಹಾರ ಕಿಡ್ ವಿವರಿಸಿದರು.
ಈ ವೇಳೆಯಲ್ಲಿ ಮಾತನಾಡಿದ ಕಮಕನೂರ್ ಡಾ. ಮಹಮ್ಮದ್ ಅಜಗರ್ ಚುಲಬುಲ್ ಅವರು ಮಹಾನಗರ ಪಾಲಿಕೆಯ ವರ್ಡ್ ಸಂಖ್ಯೆ 30ರ ಮಾಣಿಕೇಶ್ವರ ಮತ್ತು ಚೌಡೇಶ್ವರಿ ಕಾಲೋನಿಯಲ್ಲಿ ಲಾಕ್ ಡೌನ್ ವೇಳೆಯಲ್ಲಿ ಬಡವರ ಬಗ್ಗೆ ನಿರಂತರ ಕಾಳಜಿ ವಹಿಸಿ ಪರಿಹಾರ ಕಿಟ್ ಮತ್ತು ಕೋವಿಡ್-19 ವಿರುದ್ಧ ಜರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹಿಂದೆ ಪೌರಕಾರ್ಮಿಕರು ಸೇರಿದಂತೆ ವಿವಿಧ ಬಡಾವಣೆಯ ಬಡ ಕಾರ್ಮಿಕ ಜನರನ್ನು ಗುರುತಿಸಿ, ತರಕಾರಿ ಕಿಡ್ ಮತ್ತು ಪಡಿತರ ಕಿಟ್ ಹಂಚಲಾಗಿತ್ತು.
ಸದ್ಯ ಮೂರನೇ ಬಾರಿ ಇನ್ನೂ ವಿಶೇಷ ಮತ್ತು ಅಗತ್ಯವಿರುವ ಮಸಜಿದ್ ಇಮಾಮ್, ಟೈಲರ್ಸ್, ಸೈಕಲ್ ರೀಕ್ಷಾ ಸೇರಿದಂತೆ ಪಿಪಿಎಲ್ ಕುಟುಂಬಗಳ ಗುರುತಿಸಿ ಹಂಚುತಿರುವ ಬಗ್ಗೆ ಹರ್ಷವ್ಯಕ್ತಪಡಿಸಿದರು.