ಬೆಂಗಳೂರು: ಕೋವಿಡ್ ಲಾಕ್ ಡೌನ್ ನಿಂದಾಗಿ ತತ್ತರಿಸಿ ಹೋಗಿರುವ ಟೂರಿಸ್ಟ್ ಬಸ್ ಗಳಿಗೆ 6 ತಿಂಗಳ ತೆರಿಗೆ ವಿನಾಯಿತಿ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5 ಸಾವಿರ ರೂಪಾಯಿಗಳ ಪರಿಹಾರವನ್ನು ಟೂರಿಸ್ಟ್ ಬಸ್ ಚಾಲಕರಿಗೂ ವಿಸ್ತರಿಸುವು ಸೇರಿದಂತೆ ಹಲವು ಬೇಡಿಕೆಗೆಳನ್ನು ರಾಜ್ಯ ಸರಕಾರದ ಮುಂದೆ ಇಟ್ಟಿರುವ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳು, ಬೇಡಿಕೆ ಈಡೇರಿಸದಿದ್ದಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆಯನ್ನು ನೀಡಿದ್ದಾರೆ.
ನಗರದಲ್ಲಿಂದು ನಡೆದ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಸಂಘದ ಅಧ್ಯಕ್ಷ ಕೆ ರಾಧಾಕೃಷ್ಣ ಹೊಳ್ಳ ಮಾತನಾಡಿ, ಇಂದು ಕೋವಿದ್ ನಿಂದ ಪ್ರಪಂಚದ ಎಲ್ಲಾ ಉದ್ಯಮದ ರೀತಿಯಲ್ಲಿ ನಮ್ಮ ಉದ್ಯಮ ಅತಿ ಹೆಚ್ಚು ಬಾಧಿತವಾಗಿದ್ದು, ಏಪ್ರಿಲ್ ನಿಂದಾ ಜುಲೈ ವರೆಗೆ ಪ್ರವಾಸಿಗರ ಋತುವಿನಲ್ಲಿ ಬಂದಿರುವುದರಿಂದ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯಕ್ಕೆ ಬರೆದೆ ಇರುವುದು ಶೋಚನೀಯ ಮತ್ತು ಖಂಡನೀಯ. ಪ್ರಯಾಣಿಕರ ಇನ್ನೂ ಮುಂದೆ ಪ್ರಯಾಣಿಸುವುದು ಕಷ್ಟ ಸಾಧ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ, lockdown ಮುಕ್ತ ಆದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಪ್ರವಾಸೋದ್ಯಮ ಇನ್ನೂ ಎರಡು ವರ್ಷಗಳ ಕಾಲ ಯಾವುದೇ ಬೆಳವಣಿಗೆ ಕಾಣುವ ಅವಕಾಶ ಗಳಿಲ್ಲ, ಬಸ್ ಮಾಲೀಕರು, ಬ್ಯಾಂಕ್ ಹಣ ಮರುಪಾವತಿ, ಸಂಬಳ, ಬಾಡಿಗೆ ಈ ರೀತಿಯಲ್ಲಿ ಕೂಡಲೇ ಬೇಕಾದ ಹಲವು ತೊಂದರೆಗಳು ಇರುವುದರಿಂದ ಸರ್ಕಾರ ಈ ಸಮಯದಲ್ಲಿ ಖಾಸಗಿ ಬಸ್ ಉದ್ಯಮದ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್ ಶರ್ಮಾ ಮಾತನಾಡಿ, ಸರ್ಕಾರ ಹಿಂದಿನಿಂದಲೂ ಖಾಸಗಿ ಬಸ್ ಉದ್ಯಮದ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ನಮ್ಮ ನ್ನು ಹಾಲು ಕೊಡವ ಕಾಮಧೇನುವನ್ನು ತಮಗೆ ಬೇಕಾದ ರೀತಿಯಲ್ಲಿ ತೆರಿಗೆಯನ್ನು ಹೆಚ್ಚಿಸಿಕೊಂಡು ಬಂದಿದೆ. ಒಮ್ಮೆಯೂ ಸಹ ಈ ಉದ್ದಿಮೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ತೆರಿಗೆ ಕಟ್ಟಲು ಸಾಧ್ಯವೇ ಎಂದು ಯೋಚಿಸುವ ಸೌಜನ್ಯವನ್ನೂ ತೋರಿರುವುದಿಲ್ಲ. ಖಾಸಗಿ ಬಸ್ ಮಾಲೀಕತ್ವವನ್ನು ವಿರೋಧಿ ಸುತ್ತಲೇ ಬಂದಿರುವ ಸರ್ಕಾರ, ತನ್ನ ಸ್ವಾಮ್ಯ ದಲ್ಲಿರುವ ಸಾರಿಗೆ ಸಂಸ್ಥೆಗಳು ಯಾವುದೇ ತೆರಿಗೆ ಕಟ್ಟದೆ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಂಡರು ಸಹ ನಷ್ಟದಲ್ಲಿರುವುದು ಕಾಣಬಹುದಾಗಿದೆ.
ಸೋಮುವಾರದಂದು ಮಾನ್ಯ ಸಾರಿಗೆ ಸಚಿವರಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಈ ಬೇಡಿಕೆಗಳಿಗೆ ಮುಂದಿನ ಗುರುವಾರದ ಒಳಗಾಗಿ ಸಕಾರಾತ್ಮಕವಾಗಿ ಸ್ಪಂದನೆ ನೀಡದಿದ್ದಲ್ಲಿ ಸಾರಿಗೆ ಆಯುಕ್ತರ ಕಚೇರಿ ಮುಂದೆ ನಮ್ಮ ವಾಹನಗಳನ್ನು ತಂದು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಖಾಸಗಿ ಬಸ್ ಮಾಲೀಕರು ಎಷ್ಟೇ ಬೇಡಿಕೊಂಡರು ಇಲ್ಲಿಯವರೆಗೆ ಒಳ್ಳೆಯ ವ್ಯವಸ್ಥೆಯ ಬಸ್ ನಿಲ್ದಾಣಗಳನ್ನು ನೀಡಿರುವುದಿಲ್ಲ. ತನ್ನ ಸ್ವಾಮ್ಯದಲ್ಲಿ ಇರುವ ಸಾರಿಗೆ ಇಲಾಖೆಗೆ ಪ್ರತಿ ವರ್ಷ ಕೋಟಿ ಕೋಟಿ ಅನುಧಾನ ನೀಡುತ್ತಿದ್ದು ನಷ್ಟದಲ್ಲಿ ಇರುವುದು ಕಾಣಬಹುದು. ಹಲವಾರು ಸರ್ಕಾರಗಳು ತನ್ನ ಸ್ವಾಮ್ಯದಲ್ಲಿ ಇದ್ದ ಸಾರಿಗೆ ಇಲಾಖೆಯನ್ನು ನಡೆಸಲಾಗಿದೆ ಖಾಸಿಗೆ ಯವರಿಗೆ ಬಿಟ್ಟುಕೊಟ್ಟು ಇಂದು ಯಾವುದೇ ಅನ್ಯ ನಷ್ಟ ಇಲ್ಲದೆ ತೆರಿಗೆ ರೂಪದಲ್ಲಿ ಲಾಭವನ್ನು ಮಾಡುತ್ತಿರುತ್ತದೆ.
ಇಂದು ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬ ಬಸ್ ಮಾಲೀಕ 2500 ರಿಂದ 4000 ರೂ ಗಳಂತೆ ಪ್ರತಿ ಸೀಟಿಗೆ ಮುಂಗಡವಾಗಿ ಮೂರು ತಿಂಗಳಿಗೆ ಒಮ್ಮೆ ಕಟ್ಟುತ್ತಿರುತ್ತಾರೆ. ಇದರಲ್ಲಿ ಯಾವುದೇ ರೀತಿಯಾದ ಕೊಡುಗೆ ಮಾಲೀಕರಿಗೆ ಸರ್ಕಾರದ ಕಡೆಯಿಂದ ಇರುವುದಿಲ್ಲ. ಇಷ್ಟಲ್ಲದೆ ಇನ್ಸೂರೆನ್ಸ್, ರಸ್ತೆ ಉಪಯೋಗಿಸಲು ಟೋಲ್,ಪರ್ಮಿಟ್ ಶುಲ್ಕ, ನವೀಕರಣ ಶುಲ್ಕ, ಫಿಟ್ನೆಸ್ ಪಡೆಯಲು ಶುಲ್ಕ, ಅನ್ಯ ರಾಜ್ಯಗಳಿಗೆ ಹೋಗುವಾಗ ಪರವಾನಿಗೆ ಶುಲ್ಕ ಈ ರೀತಿಯಲ್ಲಿ ಇನ್ನೂ ತನ್ನದೇ ಆದ ಹಲವು ರೀತಿಯಾದ ಶುಲ್ಕವನ್ನು ಮತ್ತು ತೆರಿಗೆಯನ್ನು ಕಟ್ಟಿಸಿಕೊಂಡು ಖಾಸಗಿ ಬಸ್ ಉದ್ಯಮ ಶೋಷಣೆಗೆ ಒಳಗಾಗಿ ಪ್ರಯಾಣಿಕರ ತನ್ನ ಸೇವೆಯನ್ನು ಸರ್ಕಾರ ನೀಡುವ ಸೇವೆಗಿಂತಲೂ ಐಶಾರಾಮಿ ಸೇವೆಯನ್ನು ಸರ್ಕಾರದ ದರಕ್ಕಿಂತ ಕಡಿಮೆ ದರದಲ್ಲಿ ನೀಡುತ್ತಿರುತ್ತಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಉಪಾಧ್ಯಕ್ಷರಾದ ಬಿ ರಾಜಾ, ನರೇಶ್ ಉಡುಪ, ಹಿರಿಯ ಸಲಹೆಗಾರರಾದ ಲಕ್ಷ್ಮಣ್ ಕೆ ಅಮಿನ್, ಖಚಾಂಚಿ ಎಂ ದೇವರಾವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಪ್ರವಾಸಿ ವಾಹನಗಳ ಸಂಘ, ಸರ್ಕಾರ ನಮ್ಮನ್ನು ಕಡೆಗಣಿಸಿರುವುದು ಎದ್ದು ಕಾಣುತ್ತಿರುವುದರಿಂದ, ಇಂದು ಸಭೆ ನಡೆಸಿ ಈ ಕೆಳಗಿನಂತೆ ಸರಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತಿದೆ.
1. 6 ತಿಂಗಳ ಅವಧಿಯ ರಸ್ತೆ ತೆರಿಗೆ ವಿನಾಯಿತಿ.
2. ನಂತರದ 6 ತಿಂಗಳ ಅವಧಿಯಲ್ಲಿ 50% ತೆರಿಗೆ ವಿನಾಯಿತಿ,
3. ಮುಂಗಡ ತೆರಿಗೆ ಕಟ್ಟಲು ಈಗಿರುವ 15 ದಿನಗಳ ರಿಯಾಯಿತಿ ಅವಧಿಯನ್ನು 30 ದಿನಗಳಿಗೆ ವಿಸ್ತರಣೆ. (ಈ ವರ್ಷಕ್ಕೆ ಮಾತ್ರ ಸೀಮಿತ ಆಗುವಂತೆ.)
4. ಈಗಾಗಲೇ ಸರ್ಕಾರ ನೀಡಿರುವ ಚಾಲಕರ 5000 ರೂಗಳ ಪರಿಹಾರಕ್ಕೆ, ಬಸ್ ಚಾಲಕರನ್ನು ಸೇರಿಸಲು ವಿನಂತಿ.
5. ಅಂತರ್ ರಾಜ್ಯ ತೆರಿಗೆ ಮುಕ್ತ ಒಪ್ಪಂದಕ್ಕೆ ಸಹಿ,( ರೆಸಿಪ್ರೋಕಲ್ ಅಗ್ರೀಮ್ಮೆಂಟ್) ಇವೆಲ್ಲವೂ ರಾಜ್ಯ ಸರ್ಕಾರಕ್ಕೆ ಇಟ್ಟಿರುವ ಮನವಿ ಮತ್ತು ಬೇಡಿಕೆಗಳು.
ಕೇಂದ್ರ ಸರ್ಕಾರಕ್ಕೆ.
1. ಬ್ಯಾಂಕ್ ಗಳಿಗೆ ಮಾಸಿಕ ಹಣ ಕಟ್ಟಲು 6 ತಿಂಗಳಿನ ಕಾಲಾವಕಾಶ.
2. ಯಾವುದೇ ಬಸ್ಸುಗಳನ್ನು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆ ಯವರು ಬಸ್ಸುಗಳನ್ನು ಒಂದು ವರ್ಷದ ಅವಧಿಗೆ ಸೀಜ್ ಮಾಡದಂತೆ ಸರ್ಕಾರದಿಂದ ಆದೇಶ ಮತ್ತು ನಿರ್ದೇಶನ.
3. ಯಾವುದೇ ಅಡಮಾನ ಪಡೆಯದೆ ಸಾಲ ಸೌಲಭ್ಯ, ತಾತ್ಕಾಲಿಕ overdraft facility.
4. ಒಂದು ವರ್ಷ ಅವಧಿಗೆ ಹವಾನಿಯಂತ್ರಿತ ವಾಹನಗಳಿಗೆ GST ವಿನಾಯಿತಿ.
5. ಎರಡು ವರ್ಷಗಳ ಕಾಲ 15% ಟೋಲ್ ವಿನಾಯಿತಿ.
6. ಕೊವಿದ್ – 19 lockdown ದಿನಗಳ ವಿಮಾ ಯೋಜನೆ ಮುಂದಿನ ದಿನ ಗಳಿಗೆ ವಿಸ್ತರಣೆ.
7. ಒಂದು ದೇಶ, ಒಂದೇ ಪರಿವಾನಿಗೆ, ಒಂದೇ ತೆರಿಗೆ ಕಾನೂನು ಜಾರಿಗೆ ತರಲು ಬೇಡಿಕೆ ಮತ್ತು ಒತ್ತಾಯ ಮಾಡುತ್ತಿದ್ದೇವೆ.