ಗುಲ್ಬರ್ಗ ವಿವಿಯ ಪರೀಕ್ಷಾ ಶುಲ್ಕ ಕಡಿತಗೊಳಿಸಲು ಎಸ್ ಎಫ್ ಐ ಆಗ್ರಹ

0
59

ಕಲಬುರಗಿ; ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯವು ತನ್ನ ಪ್ರಕಟಣೆಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಿಸಿದ್ದು ಈ ಕೂಡಲೇ ಶುಲ್ಕ ಕಡಿತಗೊಳಿಸಬೇಕೆಂದು ಜಿಲ್ಲಾ ಎಸ್ ಎಫ್ ಐ ಸಂಘಟನೆ ಆಗ್ರಹಿಸಿದೆ.

ವಿಶ್ವದಾದ್ಯಂತ ಜನರು ಲಾಕ್ ದೌನ್ ಸುಳಿಯಲ್ಲಿ ಸಿಲುಕಿರುವುದು ಗೊತ್ತೇ ಇದೆ, ಅದರಲ್ಲಿ ಕಲಬುರ್ಗಿಯ ಜನತೆಗೆ ಸಾಂಕ್ರಾಮಿಕ ರೋಗ ಜನರಲ್ಲಿ ಭಯಭೀತಿಗೊಳಿಸಿದ್ದು ಇಂತಹ ಸಂದರ್ಭದಲ್ಲಿ ದುಡ್ಡಿನ ಸಮಸ್ಯೆಗೆ ಒಳಗಾಗಿದ್ದು ಗೊತ್ತಿರುವ ವಿಚಾರ. ಅಂಥದ್ರಲ್ಲಿ ಗುಲ್ಬರ್ಗ ವಿವಿ ಶುಲ್ಕ ಹೆಚ್ಚಳ ಕುರಿತು ಹೊರಡಿಸಿದ್ದ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಮನವಿ ಮಾಡಿದೆ.

Contact Your\'s Advertisement; 9902492681

ವಿವಿಯ ಪ್ರಕಟನೆಯಲ್ಲಿ ಪ್ರಯೋಗಿಕ ಪರೀಕ್ಷೆ ಹೊಂದಿದ್ದವರಿಗೆ 1750, ಮತ್ತು ಪ್ರಾಕ್ಟಿಕಲ್ ಇಲ್ಲದವರಿಗೆ ನಿಗದಿ ಮಾಡಿದ್ದು, ನಿಗದಿತ ಅವಧಿಯೊಳಗೆ ಕಟ್ಟದಿದ್ದರೆ 800 ರೂ. ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿತ್ತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೈಲಾರಿ ದೊಡ್ಮನಿ,ಕಾರ್ಯದರ್ಶಿ ಸಿದ್ದಲಿಂಗ ಪಾಳಾ,ವಿಶ್ವನಾಥ ರಾಗಿ, ಉಮೇಶ್ ,ಹುಸೇನಿ ಪಾಳಾ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here