ಕಲಬುರಗಿ: ಕೊರೊನಾ ವ್ಯೆರಸ್ ಲಾಕ್ ಡೌನ್ ಪ್ರಯುಕ್ತ ರಾಜ್ಯ ದಲ್ಲಿ ಅನೇಕ ಶಾಲಾ ಕಾಲೇಜುಗಳಲ್ಲಿ ಆನ್ ಲೈನ್ ಶಿಕ್ಷಣ ಪದ್ದತಿ ಅನುಸಾರವಾಗಿ ಮಕ್ಕಳಿಗೆ ಮೊಬೈಲ ಮುಲಕವೇ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಮಧ್ಯಮ ಹಾಗೂ ಬಡ ಮಕ್ಕಳ ಪಾಲಕರಿಗೆ ಬಿಸಿ ತುಪ್ಪ ವಾಗಿ ಪರಿಣಮಿಸಿದೆ ಎಂದು ವಚನೊತ್ಸವ ಪ್ರತಿಷ್ಠಾನ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು ಶಾಲಾ ಕಾಲೇಜುಗಳ ಸಮಯದಲ್ಲಿಯಾದರೂ ಮಕ್ಕಳು ಒಂದಿಷ್ಟು ಮೊಬೈಲದಿಂದ ದೂರ ವಿರಬಹುದೆಂದು ಸಮಾಧಾನದಿಂದ್ದಿದ ಪಾಲಕರಿಗೆ ಹಾಗೂ ಊಣ್ಣದೆ ಅಡ್ಡಿ ಮಾಡುವ, ಅಳುತ್ತಿರುವ ಮಕ್ಕಳಿ ಕೈಯಲ್ಲಿ ಸ್ವತಃ ಪಾಲಕರೇ ಮೊಬೈಲ ಕೊಟ್ಟು ಸಂತೈಸುವ ಕಾಲಗರ್ಭದಲ್ಲಿ ಅನೇಕ ಶಾಲಾ ಕಾಲೇಜುಗಳಲ್ಲಿ ಆನ್ ಲೈನ್ ಶಿಕ್ಷಣ ಪದ್ದತಿ ಪ್ರಾರಂಭಿಸಿದ್ದು ಮದ್ಯಮ ಹಾಗೂ ಬಡ ಮಕ್ಕಳ ಪಾಲಕರಿಗೆ ಸುಟ್ಟ ಗಾಯದ ಮೇಲೆ ಬರೆ ಎಳೆದಂತಾ ಪರಿಸ್ಥಿತಿನಿರ್ಮಾಣವಾಗುತ್ತಿದೆ ಅಲ್ಲದೆ ಮೊದಲೇ ಕೊವಿಡ್ 19 ದಿಂದ ಆರ್ಥಿಕವಾಗಿ ಪರಿಸ್ಥಿತಿ ಕೆಟ್ಟಿದ್ದು ಈಗ ಪಾಲಕರು ಮಕ್ಕಳಿಗೆ ಎನ್ ಡ್ರಾಡ್ ಮೊಬೈಲ ಎಲ್ಲಿಂದ ಹೇಗೆ ಕೊಡಿಸಬೆಕೇಂದು ಚಿಂತೆಯಲ್ಲಿ ಮುಳುಗಿದ್ದಾರೆ ಒಂದು ವೇಳೆ ಇದು ಹೀಗೆ ಮುಂದುವರೆದರೆ ಮಕ್ಕಳು ದೈಹಿಕ ವಾಗಿ ಬೆಳೆವಣಿಗೆಗೆ ಕುಂಠಿತ ವಾಗಬಹುದಲ್ಲದೆ, ಮೊಬೈಲ ನಿಂದ ಸ್ವಲ್ಪ ಒಳ್ಳೆಯ ಮಾಹಿತಿ ಪಡೆಯಬಹುದು ಆದರೆ ಅತಿಯಾದ ಬಳಕೆ ಯಿಂದ ಬೆಳೆಯುವ ಮಕ್ಕಳಿಗೆ , ಯುವಕರಿಗೆ ದುಶ:ಪರಿಣಾಮ ಬಿರಬಹುದು ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿ, ಸಾಮಾಜಿಕ,ಬೆಳೆಯಲು ಆನ್ ಲೈನ್ ಪದ್ದತಿ ಅಳವಡಿಸಿ ಕೊಳುವುದು ಸೂಕ್ತ ಆದರೆ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇದು ಸರಿಯಲ್ಲ ಏಕೆಂದರೆ ಮಕ್ಕಳಿಗೆ ತರಗತಿಯಲ್ಲಿ ಸೈದ್ದಾಂತಿಕವಾಗಿ ಬೇೂದನೆ ಮಾಡಿದರೆ ನೈಜ ಅನುಭವ ದೊರೆಯಲು ಸಾಧ್ಯವಾಗುವುದಿಲ್ಲ. ಜೊತೆಗೆ ವಿಷಯಗಳನ್ನು ಪ್ರಾಯೋಗಿಕ ಹಾಗೂ ಮಾದರಿ ರೂಪದಲ್ಲಿ ತೇೂರಿಸಿದರೆ ಮಾತ್ರ ಮಕ್ಕಳಿಗೆ ಬೇಗನೆ ಅರ್ಥ ಮಾಡಿಕೊಳ್ಳಲು, ದೀರ್ಘಕಾಲ ನೆನಪಿನಲ್ಲಿಡಲು ಹಾಗೂ ಕಲಿಕೆ ಪರಿಣಾಮಕಾರಿಯಾಗಿ ಸಾದ್ಯವಾಗುತ್ತದೆ ಎಂಬುದು ಅಂಡಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ರಜೆಯಂದರೆ ಮಕ್ಕಳಿಗೆ ಹಬ್ಬ ದ ವಾತಾವರಣ ದೈಹಿಕ ಶಕ್ತಿ ಬಲಗೊಳಿಸುವ ಸಕಾಲವದು.ಈಗ ಕಾಲ ಬದಲಾಗಿದೆ ಮಕ್ಕಳು ಬದಲಾಗಿದ್ದಾರೆ ಇವರು ಆಟದ ಮೈದಾನಕ್ಕಿಳಿಯುವುದಿಲ್ಲ, ಸೈಬರ್ ಕೆಫಯೇ ಆಟದ ಮೈದಾನ ಕಂಪೂಟರ್ ಕೀ ಮೌಸೇ ಬ್ಯಾಟು ಬಾಲು ಎಂದು ದೈಹಿಕ ಬೆಳೆವಣಿಗೆಯ ಮಾರಕವಾಗುತ್ತಿರುವ ಪರಿಸ್ಥಿತಿ ಸ್ಮರಿಸಿಕೊಂಡಿದ್ದಾರೆ.