ಬೆಳಗಾವಿ: ಕೊರೊನಾ ವೈರಸ್ ಹರಡದಂತೆ ಜವಾಬ್ದಾರಿ ನಿರ್ವಹಿಸುತ್ತಿರುವ ದಾವಣಗೆರೆ ಜಿಲ್ಲಾಡಳಿತದ ಕೆಲಸವನ್ನು ನಿರಂತರವಾಗಿ ರಾಘು ದೊಡ್ಡಮನಿ ಬೆಂಬಲಿಸುತ್ತಾ ಬಂದಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆ- ಕರ್ನಾಟಕ ರಾಜ್ಯ ರಾಜ್ಯ ಸಂಚಾಲಕರಾದ ರವೀಂದ್ರ ನಾಯ್ಕರ್ ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕಿಗೆ ಧರ್ಮದ ಲೇಪನ ಹಚ್ಚುತ್ತಿದ್ದವರನ್ನು ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬರೆದರು’ ಎಂಬ ಕಾರಣಕ್ಕೆ ಕೇಸ್ ದಾಖಲಿಸಿರುವುದು ಘನತೆಯ ಕೆಲಸವಂತೂ ಅಲ್ಲ. ಬಂಧನ ಮತ್ತಿತರ ಅನಗತ್ಯ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇವೆ.
ಈಗ ಕರ್ನಾಟಕ ರಣಧೀರ ಪಡೆಯ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ರಾಘು ದೊಡ್ಡಮನಿ ಮಾನವ ಬಂಧುತ್ವ ವೇದಿಕೆಯ ಸಕ್ರಿಯರಾಗಿ ಕೆಲಸ ಮಾಡಿದವರು. ದುರುದ್ದೇಶಿತ ಈ ಪ್ರಕರಣ ಅಭಿವ್ಯಕ್ತಿಯ ಮೇಲಿನ ಹಲ್ಲೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಧರ್ಮದ್ವೇಷದ ಹೇಳಿಕೆ ನೀಡುವವರನ್ನು ಬಂಧಿಸುವ ಬದಲು, ಧರ್ಮದ ದುರ್ಬಳಕೆ ಖಂಡಿಸಿದವರ ಮೇಲೆ ದೂರು ದಾಖಲಿಸಿರುವುದು ಪೋಲಿಸರ ಪಕ್ಷಪಾತದ ಧೋರಣೆ ಯನ್ನು ಮಾನವ ಬಂಧುತ್ವ ವೇದಿಕೆ- ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.