ಕೇಂದ್ರ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ಕಮ್ಯುನಿಸ್ಟ್‍ರ ಪ್ರತಿಭಟನೆ

0
24

ಆಳಂದ: ಬಂಡವಾಳ ಶಾಹಿ ಕಂಪನಿಗಳಿಗೆ ನೆರವಾಗುವ ಎಪಿಎಂಸಿ ಕಾಯ್ದೆ ಸುಗ್ರಿವಾಜ್ಞೆ ಮೂಲಕ ಮಾಡಲಾದ ತಿದ್ದುಪಡಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕ ಎಂಬ ಇತರ ಬೇಡಿಕೆಗೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದೊಂದಿಗೆ ತಹಸೀಲ್ದಾರ ದಯಾನಂದ ಪಾಟೀಲ ಅವರಿಗೆ ಬೇಡಿಕೆಯ ಮನವಿ ಸಲ್ಲಿಸಿದ ಪಕ್ಷದ ತಾಲೂಕು ಕಾರ್ಯದರ್ಶಿ ಪಾಂಡುರಂಗ ಮಾವೀನಕರ್, ಮುಖಂಡ ಸುಧಾಮ ಧನ್ನಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಲಾಕ್‍ಡೌನ್ ನೀತಿಯಿಂದಾಗಿ ಸಹಸ್ರಾರು ಜನ ವಲಸೆ ಕಾರ್ಮಿಕರು ದಿನಗೂಲಿ ಕೆಸಲಗಾರರು ಅಪಾರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರವು ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಮತ್ತು ಹಣಕಾಸು ಸಚಿವೆ ನೀಡಿರುವ ವಿವರಗಳು ಜನರಿಗೆ

Contact Your\'s Advertisement; 9902492681

ಅನುಕೂಲ ಮಾಡುವ ಮೂಲ ಉದ್ಧೇಶಗಳನ್ನು ಈಡೇರಿಸದಿರುವ ರಾಜಕೀಯ ಪ್ರಹಸನವಾಗಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ರಾಜ್ಯ ಸರಕಾರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಬಾರದು. ವಲಸೆ ಕಾರ್ಮಿಕರಿಗೆ ಆಹಾರ, ಕುಡಿಯುವ ನೀರು ಹೆಚ್ಚಿನ ಸಂಖ್ಯೆಯಲ್ಲಿ ರೈಲು ಬಸ್ಸುಗಳು ವ್ಯವಸ್ಥೆ ಮಾಡಬೇಕು. ಪ್ರತಿ ಕಾರ್ಮಿಕನಿಗೂ 10 ಸಾವಿರ ರೂ.ಗಳ ಪ್ರಯಾಣ ಭತ್ಯೆ ನೀಡಬೇಕು ಹಾಗೂ ನಿರೋದ್ಯೋಗಿಗಳಿಗೆ ನಿರೋದ್ಯೊಗ ಭತ್ಯೆ ನೀಡಬೇಕು ಸೇರಿದಂತೆ 10 ಬೇಡಿಕೆಗಳನ್ನು ಇಡೇರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಪ್ರಕಾಶ ಜಾನೆ, ಬಸವಲಿಂಗಪ್ಪ ಗಾಯಕವಾಡ, ಫಯಾಜ್ ಪಟೇಲ ಮತ್ತಿತರರು ಪಾಲ್ಗೊಂಡಿದ್ದರು.

ಸಿಎಂಗೆ ಮನವಿ: ರೈತರ ಐದು ಎಚ್‍ಪಿ ಪಂಪಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸುಮಾರು 36 ಸಾವಿರ ರೂಪಾಯಿಗಳ ಖರ್ಚು ಭರಿಸುವಂತಾಗಿದೆ. ಕೂಡಲೇ ಆದೇಶವನ್ನು ಪರಮಾರ್ಶಿಸಿ ಕನಿಷ್ಠ 10 ಸಾವಿರ ರೂಪಾಯಿ ಪಡೆಯುವಂತೆ ಜೆಸ್ಕಾಂಗೆ ಆದೇಶಿಸಬೇಕು ಎಂದು ಕಲ್ಯಾಣ ಕರ್ನಾಟಕ ರೈತಪರ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಆಧಿನಾಥ ಹೀರಾ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ ಅವರು, ಹೊಸ ಪಂಪಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ರೈತರಿಗೆ ಆರ್ಥಿಕ ಹೊರೆಯಾಗುತ್ತಿದೆ. ಕೂಡಲೇ ಮುಖ್ಯಂತ್ರಿಗಳು ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here