ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಕ್ವಾರಂಟೈನ್‍ನಲ್ಲಿರುವವರಿಗೆ ಉಪಹಾರ ವಿತರಣೆ

0
48

ಕಲಬುರಗಿ : ಮನುಕುಲಕ್ಕೆ ಕಂಟಕ ಪ್ರಾಯವಾಗಿರುವ ಕೊರೋನಾ ವೈರಸ್ ತಡೆಗಟ್ಟುವುದು ಅತ್ಯಗತ್ಯವಾಗಿದ್ದು, ಅದರಲ್ಲೂ ಗ್ರಾಮೀಣ ಭಾಗಕ್ಕೆ ಈ ವೈರಸ್ ಹರಡದಂತೆ ನೋಡಿಕೊಳ್ಳುವ ನಿಟ್ಟಿನತ್ತ ಯುವಕರು ಜನರಲ್ಲಿ ಜಾಗೃತಿ ಜೊತೆಗೆ ತಿಳುವಳಿಕೆ ನೀಡುವ ಕಾರ್ಯ ಮಾಡುವಂತೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಬಸವರಾಜ ಮತ್ತಿಮೂಡ ಕರೆ ನೀಡಿದರು.

ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ವತಿಯಿಂದ ಕ್ವಾರಂಟೈನ್‍ನಲ್ಲಿರುವವರಿಗಾಗಿ ಆಯೋಜಿಸಿದ ಬೆಳಗಿನ ಉಪಹಾರ ವಿತರಿಸಿ ಮಾತನಾಡಿದ ಅವರು ದುಡಿಮೆಗಾಗಿ ವಲಸೆ ಹೋದ ಗ್ರಾಮದ ಜನತೆ ಮರಳಿ ಗ್ರಾಮಗಳಿಗೆ ಬಂದಿದ್ದು ಸರಕಾರ ಅವರಿಗೆ ಎಲ್ಲ ರೀತಿಯಿಂದ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದ್ದು ಆರೋಗ್ಯದ ಹಿತದೃಷ್ಟಿಯಿಂದ ಸರಕಾರ ನೀಡಿರುವ ಎಲ್ಲ ನಿಯಮಗಳನ್ನು ಪಾಲಿಸುವಂತೆ ನುಡಿದ ಅವರು ಶ್ರೀನಿವಾಸ ಸರಡಗಿಯ ಶ್ರೀಮಠ ಸದಾ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪೂಜ್ಯರು ಬೆಳಗಿನ ಉಪಹಾರದ ವ್ಯವಸ್ಥೆ ಮಾಡುವುದರ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ನುಡಿದರು.

Contact Your\'s Advertisement; 9902492681

ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಡಾ. ರೇವಣಸಿದ್ದ ಶಿವಾಚಾರ್ಯರು ಮಾತನಾಡಿ ಕೊರೊನಾ ರೋಗದಿಂದ ಬಡವರ, ದುಡಿಯುವವರ, ಕೃಷಿ ಕೂಲಿ ಕಾರ್ಮಿಕರ ಬದುಕು ಸಂಕಷ್ಟದಲ್ಲಿದ್ದು ಅದರಲ್ಲೂ ಸಾವಿರಾರು ಕಿ.ಮೀ. ದೂರವಿದ್ದು ಮರಳಿ ಊರಿಗೆ ಬಂದವರಿಗೆ ಸರಕಾರ ಎಲ್ಲ ವ್ಯವಸ್ಥೆ ಕಲ್ಪಿಸುತ್ತಿದ್ದು ಸರಕಾರದೊಂದಿಗೆ ಸ್ಥಳೀಯರು ಸೇರಿ ಒಂದುಷ್ಟು ಸಹಾಯ ಮಾಡುವಂತ ನುಡಿದ ಪೂಜ್ಯರು ಶ್ರೀಮಠದ ವತಿಯಿಂದ ಒಂದಿಷ್ಟು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೂಜ್ಯರು ನುಡಿದರು. ಈ ಸಂದರ್ಭದಲ್ಲಿ ಗ್ರಾಮದ ಕಾಲೇಜು, ಹಾಸ್ಟೆಲ್ ಸೇರಿದಂತೆ ಮೂರು ಕಡೆ ಕ್ವಾರೆಂಟೈನ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರಿಗೂ ಉಪಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಿಂಗರಾಜ ಬಿರಾದಾರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಸಂಗಮೇಶ ವಾಲಿ, ಮುಖಂಡರಾದ ಪ್ರಭು ಪಾಳಾ, ನಾಗಲಿಂಗಯ್ಯ ಮಠಪತಿ, ಸಂತೋಷ ಆಡೆ, ವಿನೋದ ಪಾಟೀಲ, ರೇವಣಸಿದ್ದಯ್ಯ ಮಠಪತಿ ಕುಸನೂರ, ಅಶೋಕ ಬಬಲಾದ, ಸುರೇಶ ತಂಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here