ಸುರಪುರ: ಹುಣಸಗಿ ತಾಲೂಕಿನ ಪರತನಾಯ್ಕ ತಾಂಡಾದ ಕ್ವಾರಂಟೈನ್ ಕೇಂದ್ರದಲ್ಲಿನ ವ್ಯಕ್ತಿಯೊಬ್ಬ ಬಾಗುಲು ಮುರಿದು ಹೊರಗೆ ಬಂದು ಉದ್ಧಟತನ ಮೆರೆದ ಘಟನೆ ನಡೆದಿದೆ.ಮುಂಬೈಗೆ ಗುಳೆ ಹೋಗಿ ಬಂದಿದ್ದ ವೆಂಕಟೇಶ ರಾಮಜಿ ಎಂಬ ವ್ಯಕ್ತಿ ಮತ್ತವರ ಕುಟುಂಬವನ್ನು ವಲಸೆ ಹೋಗಿದ್ದ ಮುಂಬೈನಿಂದ ಕರೆತಂದು ಪರತನಾಯ್ಕ ತಾಂಡಾದ ಸರಕಾರಿ ಶಾಲೆಯ ದಿಗ್ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು.ಮಂಗಳವಾರ ಸಂಜೆ ದಿಗ್ಬಂಧನ ಕೇಂದ್ರದ ಬಾಗಿಲು ಮುರಿದು ಹೊರ ಬಂದು ಓಡಾಡುತ್ತಿದ್ದನು.ಇದನ್ನು ಗಮನಿಸಿದ ತಾಂಡಾದ ಜನತೆ ಪೊಲೀಸರಿಗೆ ಸುದ್ದಿ ತಿಳಿಸಿದರು.
ಕ್ವಾರಂಟೈನ್ ಸ್ಥಳಕ್ಕೆ ಕೊಡೆಕಲ್ ಠಾಣೆಯ ಎಎಸ್‍ಐ ಭೀಮಾಶಂಕರ ಬಂದು ಓಡಾಡುತ್ತಿದ್ದ ವೆಂಕಟೇಶ ರಾಮಜಿಯನ್ನು ಕರೆತರಲು ಪ್ರಯತ್ನ ಮಾಡಿದರು,ಇದಕ್ಕೆ ಒಪ್ಪದೆ ಓಡಾಡಿದನು.ಅಲ್ಲದೆ ಪೊಲೀಸರು ಹಿಡಿದು ತರಲು ಮುಂದಾದಾಗ ಎಎಸ್‍ಐ ಭೀಮಾಶಂಕರ ಮೇಲೆ ಹಲ್ಲೆ ಮಾಡಿದ್ದಾನೆ.ಅಲ್ಲದೆ ಸ್ಥಳಿಯ ವ್ಯಕ್ತಿ ಸುನಿಲ್ ನಾಯ್ಕ ಎಂಬುವವರು ಕರೆತರು ಹೋದವನ ಮೇಲೆಯೂ ಕಚ್ಚಿ ಹಲ್ಲೆ ನಡೆಸಿದ್ದಾನೆ.
ಉದ್ಧಟತನದಿಂದ ಕ್ವಾರಂಟೈನ್‍ನಿಂದ ಹೊರಗೆ ಬಂದು ಹೋಡಾಡುವ ವೆಂಕಟೇಶ ರಾಮಜಿಗೆ ಆತನ ಪತ್ನಿ ಮತ್ತು ಸಹೋದರರು ಬೆಂಬಲಿಸಿ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ.ಗಾಯಗೊಂಡ ಇಬ್ಬರಿಗೂ ಕೊಡೆಕಲ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಹಾಗು ವೆಂಕಟೇಶ ರಾಮಜಿ ಮೇಲೆ ಕೊಡೆಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.