ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಬಿಸಿಯೂಟದ ಅಧಿಕಾರಿ ಮೌನೇಶ ಕಂಬಾರ

0
61

ಸುರಪುರ: ಎಲ್ಲರು ತಮ್ಮ ಹುಟ್ಟು ಹಬ್ಬ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೊಡ್ಡ ದೊಡ್ಡ ಹೋಟೆಲ್ ಮಹಲ್ ಹಾಗು ಧಾರ್ಮಿಕ ಸ್ಥಳಗಳಲ್ಲಿ ಆಚರಿಸಿಕೊಳ್ಳುವವರೆ ಹೆಚ್ಚು.ಆದರೆ ಕೊರೊನಾ ವಾರಿಯರ್ಸ್‍ಗೆ ಸನ್ಮಾನಿಸಿ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಗೌರವಿಸಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಪರೂಪದ ಅಧಿಕಾರಿಯೊಬ್ಬರು ನಮ್ಮ ನಡುವೆ ಇದ್ದಾರೆ.

ಸುರಪುರ ತಾಲೂಕು ಅಕ್ಷರ ದಾಸೋಹದ ಅಧಿಕಾರಿಗಳಾಗಿರುವ ಮೌನೇಶ ಕಂಬಾರವರು ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಬುಧವಾರ ಬೆಳಿಗ್ಗೆ 8 ಗಂಟೆಗೆ ತಾಲೂಕಿನ ಬಂಡೊಳ್ಳಿ ಮತ್ತಿತರೆ ಕಡೆಗಳಲ್ಲಿ ತೆರೆಯಲಾಗಿರುವ ಕೊರೊನಾ ಚೆಕ್‍ಪೋಸ್ಟ್‍ಗಳಿಗೆ ತೆರಳಿ ಕರ್ತವ್ಯದ ಮೇಲಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ,ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೆ ಮತ್ತು ಬಸ್ ಚಾಲಕ ನಿರ್ವಾಹಕರಿಗೆ ಶಾಲು ಹೊದಿಸಿ ಪುಷ್ಪವೃಷ್ಟಿ ಮಾಡಿ ಸಾಷ್ಟಾಂಗ ನಮಸ್ಕಾರದ ಮೂಲಕ ಸನ್ಮಾನಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮೌನೇಶ ಕಂಬಾರ ಮಾತನಾಡಿ,ಇಂದು ಕೊರೊನಾ ಮಹಾಮಾರಿ ಜಗತ್ತನ್ನೆ ನಲುಗಿಸಿದೆ,ಇದೊಂದು ಭಯಾನಕ ಸಾಂಕ್ರಾಮಿಕ ರೋಗವಾಗಿದೆ.ಇದರ ನಿರ್ಮೂಲನೆ ಎಂದರೆ ಅದು ಕೇವಲ ನಾವುಗಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳನ್ನು ತೊಳೆಯುವುದು ಹಾಗು ಮಾಸ್ಕ್ ಧರಿಸುವುದರಿಂದ ಸಾಧ್ಯವಿದೆ.ಈ ಎಲ್ಲಾ ಮುಂಜಾಗೃತೆಗಳನ್ನು ನಾವು ಮಾಡಿಕೊಳ್ಳದಿರುವುದಕ್ಕಾಗಿಯೆ ಇಂದು ನಮ್ಮ ರಕ್ಷಕರಾಗಿ ಪೊಲೀಸ್,ಆರೋಗ್ಯ ಇಲಾಖೆ,ಸ್ವಚ್ಛತಾ ಕರ್ಮಿಗಳು,ಅಂಗನವಾಡಿ,ಆಶಾ ಕಾರ್ಯಕರ್ತೆಯರು ಹಗಲಿರಳು ನಮಗಾಗಿ ಸೇವೆ ಸಲ್ಲಿಸುತ್ತಿರುವಿರಿ.

ಈ ನಿಮ್ಮ ಋಣವನ್ನು ಜನ ಸಾಮಾನ್ಯರಿಗೆ ತಿರಿಸಲಾಗದು.ಆದರೆ ನಾವು ನಿಮ್ಮ ಸೇವೆಯನ್ನು ಗೌರವಿಸುವ ಮತ್ತು ನಿಮ್ಮ ಅಲ್ಪ ಸೇವೆ ಮಾಡುವ ಮೂಲಕ ಆ ಪ್ರಯತ್ನ ಮಾಡಬಹುದು.ಅದರ ಅಂಗವೇ ಇಂದು ನನ್ನ ಮದುವೆ ವಾರ್ಷಿಕೋತ್ಸವವಿದ್ದು, ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುವ ಬದಲು ನಮ್ಮ ಕೊರೊನಾ ವಾರಿಯರ್ಸ್ ನಿಮ್ಮೆಲ್ಲರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಆಚರಿಸಿಕೊಳ್ಳುವ ಮೂಲಕ ಸಂತೋಷ ಪಡುತ್ತಿದ್ದೇವೆ ಎಂದರು.

ಕರ್ತವ್ಯ ನಿರತರಾಗಿದ್ದ ಪೊಲೀಸ್ ಅಧಿಕಾರಿ ಎಎಸ್‍ಐ ಭಗವಾನ್,ಪೊಲೀಸ್ ಪೇದೆ ರವಿ ರಾಠೋಡ ಸೇರಿದಂತೆ ಗೃಹ ರಕ್ಷಕದಳ ಮತ್ತು ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರನ್ನು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here