ಜಿಲ್ಲೆಯಲ್ಲಿ ಮೇ 31ರ ನಂತರ ವ್ಯಾಪಾರ-ವಹಿವಾಟಿಗೆ ಅವಕಾಶ: ಡಿಸಿ ಶರತ್.ಬಿ

0
311

ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಕುರಿತು ರ್ಯಾಂಡಮ್ ಮಾದರಿ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಿ, ಇದೇ 31ರ ನಂತರ ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟಿಗೆ ಪೂರಕ ವಾತಾವರಣ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಶರತ್. ಬಿ ಅವರು ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟು ತೆರೆಯುವ ಸಂಬಂಧ ಚರ್ಚಿಸಲು ಕರೆದಿದ್ದ ಎಫ್‍ಕೆಸಿಸಿಐ ಮತ್ತು ವಿವಿಧ ವರ್ತಕರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಎಫ್‍ಕೆಸಿಸಿಐ ಅಧ್ಯಕ್ಷರಾದ ಅಮರ್‍ನಾಥ್ ಪಾಟೀಲ್ ಅವರು ವರ್ತಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು. ವಿವಿಧ ವ್ಯಾಪಾರಿ ಹಾಗೂ ವರ್ತಕರ ಸಂಘದ ಅಧ್ಯಕ್ಷರು ಸಹ ಇದಕ್ಕೆ ಧ್ವನಿಗೂಡಿಸಿದರು. 30 ಸಾವಿರಕ್ಕೂ ಹೆಚ್ಚು ನೌಕರರು ಈ ವಲಯದಲ್ಲಿದ್ದು, ಅವರಿಗೆ ವೇತನ ನೀಡಬೇಕು. ಜೊತೆಗೆ ಸ್ಟಾಕ್ ಇರುವ ಪದಾರ್ಥ ಮುಂತಾದವು ಹಾಳಾಗುತ್ತವೆ. ಅಂಗಡಿ-ಮಳಿಗೆಗಳ ಬಾಡಿಗೆ ಪಾವತಿಸಬೇಕು ಮುಂತಾದ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, Random ಸ್ಯಾಂಪ್ಲಿಂಗ್ ಕೋವಿಡ್ ಪರೀಕ್ಷೆ ನಡೆಯುತ್ತಿರುವ ಈ ಸಂದರ್ಭದಲ್ಲಿ ತೊಂದರೆಯಾಗಬಾರದು. ಹಾಗೆಯೇ ವಲಸಿಗರು ಕೂಡ ಈಗ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೂ, Random ಟೆಸ್ಟಿಂಗ್ ಪೂರ್ಣಗೊಳಿಸಿ, ಇದೇ 31ರ ಹೊತ್ತಿಗೆ ವ್ಯಾಪಾರ ವಹಿವಾಟಿಗೆ ಮುಕ್ತ ವಾತಾವರಣ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಡಿ. ಕಿಶೋರ್ ಬಾಬು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಇದ್ದರು.

ಸಭೆಯಲ್ಲಿ ಕ್ಲಾಥ್ ಮಚೆರ್ಂಟ್ಸ್, ಪಾದರಕ್ಷೆ ಅಂಗಡಿ ವ್ಯಾಪಾರಿಗಳು, ಎಲೆಕ್ಟ್ರಾನಿಕ್ ಶಾಪ್ಸ್ ಮಾಲೀಕರು, ಮೆಕಾನಿಕಲ್ ಶಾಪ್, ಬಂಡೆ ಬಜಾರ್, ಸರಾಫ್ ಬಜಾರ್ ವ್ಯಾಪಾರಿಗಳು, ವಿವಿಧ ವಿತರಕರು ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here