ಕಲಬುರಗಿ: ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಮೋದಿ ಶಾಬಾದಿ ಅವರು ತಮ್ಮ ವೈಯಕ್ತಿಕವಾಗಿ ಸ್ವಂತ ಖರ್ಚಿನಿಂದ ಒಂದು ವಾರ ಆಗುವಷ್ಟು 50 ಕುಟುಂಬಗಳಿಗೆ ದಿನಸಿ ಕಿಟ್ಟು ಗಳನ್ನು ವಿತರಣೆ ಮಾಡಿದರು.
ಕೋರುನಾ ಎಂಬ ಮಹಾಮಾರಿ ರೋಗವು ಭಾರತ ದೇಶವನ್ನು ಅತಿವೇಗವಾಗಿ ವಕ್ಕರಿಸುತ್ತಿದ್ದು. 51 ದಿನಗಳ ಕಾಲ ಭಾರತ ದೇಶವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ಡೌನ್ ಮಾಡಲಾಗಿತ್ತು. ಇದೀಗ ನಿಯಮಗಳನ್ನು ಸಡಿಲಗೊಳಿಸಿದೆ ಕೂಡ ಕೂಲಿಕಾರ್ಮಿಕರು, ವಲಸಿಗರು, ಕೆಲಸಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಭಗವಂತನು ಯಾರಿಗೆ ಶಕ್ತಿ ನೀಡಿದ್ದಾನೆ ಅಂತಹವರು ಜಾತಿ-ಮತ-ಪಂಥ ಧರ್ಮದ ಭೇದಭಾವವನ್ನು ಮಾಡದೆ ಅವಶ್ಯಕ ಜನತೆಯ ನೆರವಿಗೆ ನಿಲ್ಲಬೇಕಾಗಿದೆ. ಅನ್ನದಾನ ಮಹಾದಾನ ಎಂಬಂತೆ ತಮ್ಮ ಶಕ್ತಿ ಇರುವಷ್ಟು ಆದರೂ ಕೂಡ ನಾವು ಅವಶ್ಯಕ ಜನರ ನೆರವಿಗೆ ನಿಲ್ಲಬೇಕಾಗಿದೆ.ಗಾಳಿ,ಹಸಿವು, ನಿದ್ದೆ, ನೀರಡಿಕೆಗೆ ಯಾವುದೆ ಜಾತಿಯಿಲ್ಲ.ಇದನ್ನು ಅರಿತು ನಾವು ಸಮಾಜದಲ್ಲಿ ಸುಂದರವಾದ ಬದುಕು ಕಟ್ಟಿ, ಈ ಕೆಟ್ಟ ಕರೋನಾ ಹೂಡೆದೋಡಿಸೋಣ ಎಂದು ಮಾನವೀಯತೆ ಮೆರೆದರು…
ಈ ಅಮೀನ್ ಶಾಬಾದಿ, ಉಸ್ಮಾನ ಶಾಬಾದಿ, ನಬಿಸಾಬ್ ಯಲಗರ್, ಮೈಬೂಬ್ ಶಾಬಾದಿ, ಬುಡ್ಡೇಸಾಬ್ ಶಾಬಾದಿ, ಅಬೂಬಕರ್ ಶಾಬಾದಿ, ರಫೀಕ್ ಶಾಬಾದಿ, ಲಾಲಸಾಬ್ ಶಾಬಾದಿ, ಅಸ್ಲಾಂ ಶಾಬಾದಿ ಇದ್ದರು.