ಶರಣಬಸವ ವಿಶ್ವವಿದ್ಯಾಲಯದಿಂದ ಕಡಿಮೆ ವೆಚ್ಚದಲ್ಲಿ ಸೋಂಕು ನಿಯಂತ್ರಣ ಯಂತ್ರ ತಯಾರಿಕೆ.

0
118

ಕಲಬುರಗಿ: ಮಾರಣಾಂತಿಕ ರೋಗ ಕೋವಿಡ್ -೧೯ದಿಂದ ರಕ್ಷಿಸಿಕೊಳ್ಳಲು ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವವರ ಮೇಲೆ ಸೋಂಕು ನಿವಾರಕ ದ್ರವ ಸಿಂಪಡಿಸಲು ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರವನ್ನು ಸ್ಥಾಪಿಸಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ನಿಲುವು, ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಸ್ವಾವಲಂಬಿಯಾಗಿ ಎಂಬ ವ್ಯಾಖ್ಯಾನ ಸಾರ್ಥಕ ಪಡಿಸಿದ್ದಾರೆ.

ಶರಣಬಸವ ವಿಶ್ವವಿದ್ಯಾಲಯದ ಬೋಧಕವರ್ಗ ಮತ್ತು ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಸಿದ್ದಪಡಿಸಿದ ಸ್ವಯಂ ಚಾಲಿತ ಸಾಬೂನು ನೀರು ವಿತರಕ (ಚಿuಣomಚಿಣiಛಿ soಚಿಠಿ ತಿಚಿಣeಡಿ ಜisಠಿeಟಿseಡಿ ) ಮತ್ತು ಪೆಡೆಲ್ ಆಪರೇಟೆಡ್ ಸ್ಯಾನಿಟೈಜರ್‌ವನ್ನು ವಿಶ್ವವಿದ್ಯಾಲಯದ ಮುಖ್ಯದ್ವಾರ ಮತ್ತು ಶರಣಬಸವೇಶ್ವರ ದೇವಸ್ಥಾನದ ಆವರಣ, ಮಹಾಮನೆ ಹಾಗೂ ಎಲ್ಲಾ ವಿಭಾಗದ ಶೌಚಗೃಹದಲ್ಲಿ ಸ್ಥಾಪಿಸಲಾಗಿದೆ.

Contact Your\'s Advertisement; 9902492681

ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರ ಹಾಗೂ ಸ್ವಯಂ ಚಾಲಿತ ಸಾಬೂನು ನೀರು ವಿತರಕವನ್ನು ತಯಾರಿಸಿದ ಕೀರ್ತಿ ವಿಶ್ವವಿದ್ಯಾಲಯದ ಮೆಕ್ಯಾನಿಕಲ್(ಯಾಂತ್ರಿಕ) ವಿಭಾಗ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗ ಮತ್ತು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕವರ್ಗ ಹಾಗೂ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ. ಕಡಿಮೆ ವೆಚ್ಚದಾಯಕವಾಗಿದ್ದ ಈ ಎರಡು ಸೌಲಭ್ಯ ಒದಗಿಸಲು ಮಧ್ಯರಾತ್ರಿಯವರೆಗೆ ಕಷ್ಟಪಟ್ಟು ಯಾವುದೇ ತೊಂದರೆಯಾಗದಂತೆ, ಸಮರ್ಥ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ವಿವಿ ಕುಲಪತಿ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ಡೀನ್ ಡಾ. ಲಕ್ಷ್ಮಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ ಅವರ ಉಪಸ್ಥಿತಿಯಲ್ಲಿ ಶರಣಬಸವೇಶ್ವರ ದೇವಸ್ಥಾನ ಹಾಗೂ ದಾಸೋಹ ಮಹಾಮನೆಯಲ್ಲಿ ಸ್ಥಾಪಿಸಿದ ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಅವರು ಸೋಮವಾರ ಉದ್ಘಾಟಿಸಿದರು.

ಸ್ವಯಂ ಚಾಲಿತ ಸೋಂಕು ನಿವಾರಕ ಮತ್ತು ಸ್ವಯಂ ಚಾಲಿತ ಸಾಬೂನು ನೀರು ವಿತರಕ ಈ ಎರಡು ಯಂತ್ರ ವಿನ್ಯಾಸಗೊಳಿಸುವಲ್ಲಿ ಮೆಕ್ಯಾನಿಕಲ್(ಯಾಂತ್ರಿಕ)ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಕುಮಾರ ರಾಚೋಟಿ ಮತ್ತು ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರಾದ ಡಾ. ಶಿವಕುಮಾರ ಜವಳಗಿ, ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನಾಗಬಸವಣ್ಣ ಗುರಾಗೋಳ ಪೆಡೆಲ್ ಆಪರೇಟೆಡ್ ಮ್ಯಾನ್ಯುವಲ್ ಹ್ಯಾಂಡ್ ಸ್ಯಾನಿಟೈಜರ್ ವಿತರಕ ತಯಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಪ್ರೊ.ರಾಚೋಟಿ ಮಾತನಾಡಿ, ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರದಲ್ಲಿ ಸಾಕಷ್ಟು ಕಾಳಜಿ ವಹಿಸಿ ಫಾರ್ಮಾ ಎಂಬ ರಾಸಾಯನಿಕ ಪದಾರ್ಥ ಬಳಸಲಾಗಿದೆ. ಮಹಾಮನೆಗೆ ಭೇಟಿ ನೀಡಲು ಆಗಮಿಸುವ ಭಕ್ತಾದಿಗಳು ಈ ಯಂತ್ರದ ಬಳಿ ಹಾದುಹೋದಾಗ, ಹಾನಿಕಾರಕ ರಾಸಾಯನಿಕ ಪದಾರ್ಥದಿಂದ ಇದು ಕಾಪಾಡುತ್ತದೆ ಎಂದರು.
ಸ್ವಯಂ ಚಾಲಿತ ಸೋಂಕು ನಿವಾರಕ ಮತ್ತು ಸ್ವಯಂ ಚಾಲಿತ ಸಾಬೂನು ನೀರು ವಿತರಕ ಈ ಎರಡೂ ಸೌಲಭ್ಯಗಳನ್ನು ತಯಾರಿಸಿದ ವೆಚ್ಚವು ಮಾರುಕಟ್ಟೆಗಿಂತ ಕಡಿಮೆ ಬೆಲೆಯದ್ದಾಗಿದೆ. ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಬೇಕಾದ ಈ ಸೌಲಭ್ಯ ನಿರ್ವಹಣೆಯನ್ನು ಈ ಎರಡೂ ವಿಭಾಗದ ಬೋಧಕ ಹಾಗೂ ಸಿಬ್ಬಂದಿ ವರ್ಗ ನಿರ್ವಹಿಸುತ್ತಾರೆ. ವಿಶ್ವವಿದ್ಯಾಲಯ ತನ್ನದೇ ಆದ ಸಿಬ್ಬಂದಿಗಳಿಂದ ಕಾರ್ಯನಿರ್ವಹಿಸುವ ಮೂಲಕ ಅಮೂಲ್ಯವಾದ ಹಣ ಉಳಿಸಬಹುದಾಗಿದೆ. ಹೊರಗಿನ ಏಜೆನ್ಸಿಗಳಿಂದ ಖರೀದಿಸುವದನ್ನು ತಪ್ಪಿಸಬಹುದು.

ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರದ ಬೆಲೆ ಪ್ರತಿ ಯೂನಿಟ್‌ಗೆ ಸರಾಸರಿ ರೂ.೫೦ ಸಾವಿರವಾಗಿದೆ. ಆದರೆ ವಿಶ್ವವಿದ್ಯಾಲಯದ ಅಧ್ಯಾಪಕರು ಇದನ್ನು ರೂ. ೧೬ ಸಾವಿರಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಿದ್ದಾರೆ. ಸ್ವಯಂ ಚಾಲಿತ ಸಾಬೂನು ವಿತರಕ ಘಟಕದ ಬೆಲೆ ರೂ. ೨ಸಾವಿರ ಆಗಿರುತ್ತದೆ. ಪೆಡೆಲ್ ಆಪರೇಟೆಡ್ ಹ್ಯಾಂಡ್ ಸ್ಯಾನಿಟೈಜರ್ ರೂ ೫೦೦ ಕ್ಕಿಂತ ಕಡಿಮೆಯಿದೆ. ಇದು ಮಾರುಕಟ್ಟೆಯ ಬೆಲೆಗಿಂತ ಕಡಿಮೆಯಾಗಿದೆ. ಸ್ವಯಂ ಚಾಲಿತ ಸೋಂಕು ನಿವಾರಕ ಯಂತ್ರದ ಪ್ರತಿ ಮಾರ್ಗವು ಎಂಟು ನಳಿಕೆಯನ್ನು ಹೊಂದಿದ್ದು, ಈ ಮಾರ್ಗವನ್ನು ಪ್ರವೇಶಿಸುವವರ ಸಂಪೂರ್ಣ ದೇಹವನ್ನು ಆವರಿಸಿಕೊಳ್ಳುತ್ತದೆ. ವ್ಯಕ್ತಿಯ ಉಪಸ್ಥಿತಿಯನ್ನು ಕಂಡುಹಿಡಿಯಲು ಹಾಗೂ ಸ್ವಯಂ ಚಾಲಿತ ಸಾಬೂನು ವಿತರಕ ದ್ರವವನ್ನು ಬಿಡುಗಡೆ ಮಾಡಲು ಸೋಂಕು ನಿವಾರಕ ಯಂತ್ರದ ವಿತರಕದಲ್ಲಿ ಸಂವೇದಕಗಳನ್ನು ಬಳಸಲಾಗಿದೆ.

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಕೋವಿಡ್ -೧೯ ಹೋರಾಟದಲ್ಲಿ ವೈರಸ ವಿರುದ್ಧ ಸಸ್ವಾವಲಂಬಿ ಕೊಡುಗೆ ನೀಡಿದ ವಿವಿ ಪ್ರಾಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

ಭೀಕರ ಕಾಯಿಲೆ ವಿರುದ್ಧ ಹೋರಾಡಲು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ನೀಡಿದ ಕೊಡುಗೆ ಕುರಿತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾದ ಬಸವರಾಜ ದೇಶಮುಖ ಶ್ಲಾಘಿಸಿದರು.

ಯಂತ್ರ ತಯಾರಿಕೆಯಲ್ಲಿ ಪ್ರೊ. ರಾಚೋಟಿ ಮತ್ತು ಡಾ. ಜವಳಗಿ ಜೊತೆ ಇತರೆ ಸಿಬ್ಬಂದಿಗಳಾದ ಪ್ರೊ. ಶರಣು ಶೇಗೆದಾರ, ಲಕ್ಷ್ಮಿಕಾಂತ ಗುರುಮೂರ್ತಿ, ಸಂಜೀವ್ ಜೀವಣಗಿ ಮತ್ತು ಪ್ರವೀಣ ಹಿಪ್ಪರ್ಗಿ ಮತ್ತು ವಿದ್ಯಾರ್ಥಿಗಳ ತಂಡ ಒಳಗೊಂಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here