ಚಿತ್ತಾಪುರ: ಸಕಲ ಜೀವಿಗಳು ಬದುಕಲು ಪರಿಸರದ ಅಗತ್ಯವಿದ್ದು ಅಂತಹ ಪರಿಸರವನ್ನು ನಾವು ಸಂರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ಸಂರಕ್ಷಣೆ ಮಾಡುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಢವಳಗಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಸಸಿ ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿ ಮಾತನಾಡುತ್ತಾ ಕೊರೊನ್ ವೈರಸ್ ದಾಳಿಯಿಂದ ಜನರ ಬದುಕು ತೊಂದರೆಯಲ್ಲಿದೆ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿವೆ, ಪರಿಸರ ಮಾಲಿನ್ಯ ಮುಕ್ತವಾಗಿದೆ ಇನ್ನು ಪರಿಸರ ಶುದ್ಧವಾಗಿ ಉಳಿಯಬೇಕಾದರೆ ಗಿಡಮರಗಳನ್ನು ಹೆಚ್ಚಿಗೆ ನೆಡುವುದು ಅಗತ್ಯವಾಗಿದೆ ಎಂದರು.
ಈ ವೇಳೆಯಲ್ಲಿ ಶಿಕ್ಷಣ ಸಂಯೋಜಕರಾದ ಸಂತೋಷ್ ಕುಮಾರ್ ಶಿರನಾಳ್, ರಮೇಶ್ ಬಟಗೇರಿ, ಶಿವಕುಮಾರ್ ಘವರಿ, ಸೇರಿದಂತೆ ಕಚೇರಿ ಸಿಬ್ಬಂದಿಗಳು ಇದ್ದರು.