ಆನ್ ಲೈನ್ ಕ್ಲಾಸಗಳ ತೊಂದರೆ ನಿವಾರಣೆಗೆ “ಸ್ಟಡಿ-ಸ್ಟೂಡೆಂಟ್ಸ್” ಮೊಬಾಯಿಲ್ ಯ್ಯಾಪ್ ಬಿಡುಗಡೆ

0
113

ಕಲಬುರಗಿ: ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದವರು ತಯ್ಯಾರಿಸಿದ “ಸ್ಟಡಿ-ಸ್ಟೂಡೆಂಟ್ಸ್” ಮೊಬಾಯಿಲ್ ಯ್ಯಾಪ್ ಆನ್ ಲೈನ್ ಕ್ಲಾಸ್‍ಗಳನ್ನು ನಡೆಸುವಲ್ಲಿ ಆಗುತ್ತಿರುವ ತೊಂದರೆಗಳಿಗೆ ಸೂಕ್ತ ಪರಿಹಾರವಾಗಿದ್ದು ಈ ಮೊಬಾಯಿಲ್ ಯ್ಯಾಪ್ ಮೂಲಕ ವಿದ್ಯಾರ್ಥಿಗಳು ತಮ್ಮ ಮೊಬಾಯಿಲ್‍ನಲ್ಲಿ ಶಿಕ್ಷಕರ ಬೋಧನೆಯನ್ನು ನೋಡಬಹುದಾಗಿದ್ದು, ಅವರು ಕಳುಹಿಸಿಕೊಡುವ ಸ್ಟಡಿ ಮೆಟೆರಿಯಲ್, ಟಿಪ್ಪಟಣೆಗಳು ಹಾಗೂ ಅಸೈನ್ಮೆಂಟ್‍ಗಳನ್ನು ಕೂಡ ಅಭ್ಯಸಿಸಬಹುದಾಗಿದೆ ಇದರ ಉಪಯೋಗನ್ನು ಸರ್ವರು ಪಡೆದುಕೊಳ್ಳಬೇಂಕೆಂದು ಹೈದ್ರಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಭೀಮಾಶಂಕರ ಸಿ. ಬಿಲಗುಂದಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕೋವಿಡ ಮಹಾಮಾರಿಯ ಪರಿಣಾಮವಾಗಿ ನೆನೆಗುದಿಗೆ ಬಿದ್ದಿರುವ ಶಿಕ್ಷಣ ಕ್ಷೇತ್ರಕ್ಕೆ ಆನ್ ಲೈನ್ ಕ್ಲಾಸ್‍ಗಳು ವರವಾಗಿ ಪರಿಣಮಿಸಿದ್ದವು, ಆದರೆ ಬಹಳಷ್ಟು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರಿಗೆ ಆನ್ ಲೈನ್ ಕ್ಲಾಸಗಳು ತೆಲೆನೋವಾಗಿ ಪರಿಣಮಿಸಿದೆ ಇದಕ್ಕೆ ಉತ್ತರ ಎಂಬಂತೆ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಶೋಕ ಪಾಟೀಲ ಮತ್ತು ಅದೇ ವಿಭಾಗದ ಪ್ರಥಮ ವರುಷದ ವಿದ್ಯಾರ್ಥಿ ಶಿವಾನಂದ ಪಾಟೀಲರು ತಯ್ಯಾರಿಸಿರುವ “ಸ್ಟಡಿ-ಸ್ಟೂಡೆಂಟ್ಸ್” ಎಂಬ ಮೊಬಾಯಿಲ ಯ್ಯಾಪ್ ಆನ್ ಲೈನ್ ಕ್ಲಸಗಳಿಗೆ ಹಾಜರಾಗಲು ತೊಂದರೆ ಪಡುತ್ತಿರುವ ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದೆ.

Contact Your\'s Advertisement; 9902492681

ಈ ಮೊಬಾಯಿಲ್ ಯ್ಯಾಪ್‍ಗೆ ಚಾಲನೆ ನೀಡಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ಈ ಮೊಬಾಯಿಲ್ ಯ್ಯಾಪ್ ಉಪಯೋಗಿಸಲು ಸರಳಿತವಾಗಿದ್ದು, ಹಳ್ಳಿಗಳಲ್ಲಿ ಮೊಬಾಯಿಲ್ ನೆಟ್ ವರ್ಕ ಸಂಪರ್ಕ ಸರಿಯಾಗಿ ಇಲ್ಲದ ಪ್ರದೇಶದಲ್ಲಿರುವ ವಿದ್ಯಾರ್ಥಿಗಳೂ ಕೂಡ ಈ ಮೊಬಾಯಿಲ್ ಯ್ಯಾಪನ್ನು ಉಪಯೋಗಿಸಿ ತಮ್ಮ ಶಿಕ್ಷಕರು ತೆಗೆದುಕೊಂಡ ಬೋಧನಾ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ, ಈ ಯ್ಯಾಪ್ ಸದ್ಯಕ್ಕೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಮಿತಗೊಳಿಸಿದ್ದು ಮುಂಬರುವ ದಿನಗಳಲ್ಲಿ ಇದನ್ನು ಇತರೆ ಕಾಲೆಜುಗಳಿಗೂ ಕೂಡ ಕೊಡಲಾಗುವುದು ಎಂದು ತಿಳಿಸಿದರು.

ಈ ಮೊಬಾಯಿಲ್ ಯ್ಯಾಪ್ ಮಾಹಿತಿ ತಂತ್ರಜ್ಞಾನ ವಿಭಾಗದ “ಇನ್ಹೋವೇಟಿವ್ ಸೆಲ್” ಅಡಿ ತಯ್ಯಾರಿಸಲಾಗಿದ್ದು ಸದ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಿಷಯದ ಮೋಲೆ ಪ್ರಯೋಗಗಳನ್ನು ನಡೆಸುತ್ತಿದ್ದಾರೆ.

ಈ ಮೊಬಾಯಿಲ್ ಯ್ಯಾಪ್‍ನ ಕಾರ್ಯ ಕೌಶ್ಯಲವನ್ನು ಸತತವಾಗಿ ಗಮನಿಸುತ್ತಿದ್ದ ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಡಾ.ಎಸ್.ಎಸ್. ಕಲಶೆಟ್ಟಿ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಹರಸೂರ ಅವರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಮುಂದಿನ ಕೆಲವು ದಿನಗಳಲ್ಲಿ ಈ ಯ್ಯಾಪ್ ನಲ್ಲಿ ಇನ್ನೂ ಹೆಚ್ಚಿನ ಸುಧಾರಣೆಗಳನ್ನು ಅವಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಮೊಬಾಯಿಲ್ ಯ್ಯಾಪ್‍ನ ತಯ್ಯಾರಿಸಿದ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಸರಳವಾಗಿ ಕ್ಲಾಸಗಳನ್ನು ನಡೆಸುವುದು ಹಾಗೂ ಅವರ ಸಮಸ್ಯಗಳಿಗೆ ಸೂಕ್ತ ಪರಿಹಾರ ವದಗಿಸುವುದಾಗಿದೆ ಎಂದು ವಿಭಾಗದ ಸಹಾಯಕ ಪ್ರಾಧ್ಯಾಪಕ ಅಶೋಕ ಪಾಟೀಲ ಅವರು ತಿಳಿಸಿದರು.

ಮೊಬಾಯಿಲ್ ಯ್ಯಾಪ್ ಬಿಡುಗಡೆ ಸಮಾರಂಭದಲ್ಲಿ ಡಾ. ಎಸ್. ಎಸ್. ಕಲಶೆಟ್ಟಿ, ಉಪ-ಪ್ರಾಚಾರ್ಯರು, ಡಾ. ಎಸ್. ಆರ್. ಪಾಟೀಲ, ಡೀನ್ ಅಕಾಡೆಮಿಕ, ಡಾ. ಭಾರತಿ ಹರಸೂರ, ಮುಖ್ಯಸ್ಥರು, ಮಾಹಿತಿ ತಂತ್ರಜ್ಞಾನ ವಿಭಾಗ, ಡಾ. ಶ್ರೀದೇವಿ ಸೋಮಾ, ಪ್ರಾಧ್ಯಾಪಕರು, ಗಣಕ ತಂತ್ರಜ್ಞಾನ ವಿಭಾಗ ಅವರು ಉಪಸ್ಥತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here