ಕಲಬುರಗಿ: ಕರೋನಾ ಕೋವಿಡ್-19 ರೋಗವು ಸಂಪೂರ್ಣವಾಗಿ ನಿಯಂತ್ರಣವಾದ ಮೇಲೆ ಶಾಲಾ ಕಾಲೇಜುಗಳು ಪ್ರಾರಂಭಿಸಬೇಕು ಮತ್ತು ಖಾಸಗಿ ಶಾಲೆಗಳಲ್ಲಿ ಡುನೇಷನ್ ಹಾವಳಿ ನಿಲ್ಲಿಸಿ ನಿಗದಿತ ಶುಲ್ಕ ನಿಗದಿ ಮಾಡಬೇಕು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯ ಪುಸ್ತಕಗಳು ಸಿದ್ದಗೊಳಿಸಬೇಕು ಹಾಗೂ ಎಸ್.ಎಸ್.ಎಸ್.ಸಿ ಪರೀಕ್ಷೆ ವೇಳೆ ಕರೋನಾ ರೋಗದಿಂದ ವಿದ್ಯಾರ್ಥಿಗಳಿಗೆ ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶ ಕುಮಾರ ಅವರಿಗೆ ಮನವಿ ಮಾಡಲಾಯಿತು ಎಂದು ಸಚಿನ್ ಫರಹತಾಬಾದ ತಿಳಿಸಿದರು.
ಕೋವಿಡ್-19 ರೋಗವು ಮಹಾ ಮಾರಿಯಂತೆ ರೋಗವು ದಿನದಿಂದ ದಿನಕ್ಕೆ ಹೆಚ್ಚಾಗಿ ಹರಡುತ್ತಿದ್ದು ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶಾಲಾ ಕಾಲೇಜುಗಳು ಪ್ರಾರಂಬಿಸುವ ಬಗ್ಗೆ ರಾಜ್ಯ ಸರಕಾರ ಚಿಂತನೆ ಮಾಡುತ್ತಿರುವುದನ್ನು ಕೈ ಬಿಡಬೇಕೆಂದು ಒಕ್ಕೂಡವು ಮನವಿ ಮಾಡುತ್ತದೆ ಎಂದರು.
ಶಾಲಾ ಕಾಲೇಜುಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಖಾಸಗಿ ಶಿಕ್ಷಣ ಸಂಸ್ಥೆಗಳು ಮನ ಬಂದಂತೆ ಡುನೇಷನ್ ಹಾವಳಿ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಜನ ಸಾಮಾನ್ಯರಲ್ಲಿ ಕೆಲಸ ಕಾರ್ಯಗಳು ಇಲ್ಲದೇ ಆರ್ಥಿಕವಾಗಿ ಸಂಕಷ್ಠ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.
ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮಿಂದ ಸೂಕ್ತವಾದ ನಿರ್ದೇಶನವೆನೆಂದರೆ ತರಗತಿವಾರು ನಿಗಧಿತ ಶುಲ್ಕ ನಿಗಧಿ ಮಾಡಿ ಶಿಕ್ಷಣ ಸಂಸ್ಥೆಗಳಿಗೆ ಆದೇಶ ನೀಡಬೇಕು ಹಾಗೂ ವಿದ್ಯಾರ್ಥಿ- ವಿಧ್ಯಾರ್ಥಿನಿಯರಿಗೆ ಸಮಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪಠ್ಯ ಪುಸ್ತಕಗಳನ್ನು ಸಿದ್ದಗೊಳಿಸುವುದರ ಜೊತೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ವೇಳೆ ಕರೋನಾ ರೋಗದಿಂದ ವಿದ್ಯಾರ್ಥಿಗಳಿಗೆ ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅಧಿಕಾರಿ ವರ್ಗದವರಿಗೆ ಆದೇಶ ನೀಡಬೇಕೆಂದು ಒಕ್ಕೂಟವು ಮನವಿ ಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ ನಾಲವಾರಕರ್, ದತ್ತು ಹೈಯ್ಯಾಳಕರ್, ಮನೋಹರ್ ಬಿರನೂರ, ಮುತ್ತಣ್ಣ ಭಾಗೆವಾಡಿ ಸೇರಿದಂತೆ ಇನ್ನಿತರರು ಇದ್ದರು.