ಲ್ಯಾಪ್‍ಟಾಪ್ ಖರೀದಿಸಲು 50 ಸಾವಿರ ಸಹಾಯಧನ: ಪಾಲಿಕೆ ಸ್ಪಷ್ಟನೆ

0
63

ಕಲಬುರಗಿ: ಮಹಾನಗರ ಪಾಲಿಕೆಯಿಂದ 2019-20ನೇ ಸಾಲಿನ ವಿಕಲಚೇತನರ ಶೇ. 5ರ ಎಸ್.ಎಫ್.ಸಿ. ಅನುದಾನದಡಿ ಅರ್ಹ ಫಲಾನುಭವಿಗಳಿಂದ ಆಹ್ವಾನಿಸಲಾದ ಪ್ರಕಟಣೆಯಲ್ಲಿ ಲ್ಯಾಪ್ ಟಾಪ್ ಖರೀದಿಗೆ ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ಎಂ.ಟೆಕ್, ಎಂ.ಎಸ್., ಎಂ.ಡಿ., ಎಂ.ಇ. ಪ್ರತಿ ವಿದ್ಯಾರ್ಥಿಗಳಿಗೆ 25,000 ರೂ.ಗಳ ಸಹಾಯಧನ ನೀಡಲಾಗುತ್ತದೆ ಎಂದು ತಪ್ಪಾಗಿ ನಮೂದಿತವಾಗಿರುತ್ತದೆ.

Contact Your\'s Advertisement; 9902492681

 

ಇದನ್ನು ಎಂ.ಬಿ.ಬಿ.ಎಸ್. ಮತ್ತು ಬಿ.ಇ. ವ್ಯಾಸಾಂಗದ ಪ್ರತಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಸಲು 50,000 ರೂ.ಗಳ ಸಹಾಯಧನ ನೀಡಲಾಗುತ್ತದೆ ಎಂದು ತಿದ್ದಿ ಓದಿಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here