ಕಲಬುರಗಿ: ಮಹಾನಗರ ಪಾಲಿಕೆಯಿಂದ 2019-20ನೇ ಸಾಲಿನ ವಿಕಲಚೇತನರ ಶೇ. 5ರ ಎಸ್.ಎಫ್.ಸಿ. ಅನುದಾನದಡಿ ಅರ್ಹ ಫಲಾನುಭವಿಗಳಿಂದ ಆಹ್ವಾನಿಸಲಾದ ಪ್ರಕಟಣೆಯಲ್ಲಿ ಲ್ಯಾಪ್ ಟಾಪ್ ಖರೀದಿಗೆ ಎಂ.ಬಿ.ಬಿ.ಎಸ್., ಬಿ.ಡಿ.ಎಸ್. ಎಂ.ಟೆಕ್, ಎಂ.ಎಸ್., ಎಂ.ಡಿ., ಎಂ.ಇ. ಪ್ರತಿ ವಿದ್ಯಾರ್ಥಿಗಳಿಗೆ 25,000 ರೂ.ಗಳ ಸಹಾಯಧನ ನೀಡಲಾಗುತ್ತದೆ ಎಂದು ತಪ್ಪಾಗಿ ನಮೂದಿತವಾಗಿರುತ್ತದೆ.
ಇದನ್ನು ಎಂ.ಬಿ.ಬಿ.ಎಸ್. ಮತ್ತು ಬಿ.ಇ. ವ್ಯಾಸಾಂಗದ ಪ್ರತಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಖರೀದಿಸಲು 50,000 ರೂ.ಗಳ ಸಹಾಯಧನ ನೀಡಲಾಗುತ್ತದೆ ಎಂದು ತಿದ್ದಿ ಓದಿಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು ತಿಳಿಸಿದ್ದಾರೆ.