ಕಲಬುರಗಿ ನಗರದ ಎಲ್ಲ ಕರ್ನಾಟಕ ಒನ್ ಕೇಂದ್ರಗಳು ಪುನರಾರಂಭ

0
55

ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಮುಚ್ಚಲ್ಪಟ್ಟಿರುವ ಎಲ್ಲ ಕರ್ನಾಟಕ ಒನ್ ಕೇಂದ್ರಗಳು ಜಿಲ್ಲಾಡಳಿತದ ಅನುಮತಿಯೊಂದಿಗೆ ಸಾರ್ವಜನಿಕರ ಸೇವೆಗಾಗಿ ಈಗಾಗಲೇ ಪುನರಾರಂಭಗೊಂಡಿವೆ ಎಂದು ಬೆಂಗಳೂರಿನ ಇ-ಆಡಳಿತ ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ್ ಕವಳಿಕಟ್ಟಿ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕಲಬುರಗಿ ನಗರದ (ಡಿ.ಸಿ.ಕಚೇರಿ) ಮಿನಿ ಮಿಧಾನಸೌಧ, ಕೆ.ಹೆಚ್.ಬಿ. ಕಾಂಪ್ಲೆಕ್ಸ್ ಹಾಗೂ ಸುಪರ ಮಾರ್ಕೇಟ್‍ನಲ್ಲಿರುವ ಕರ್ನಾಟಕ ಒನ್ ಕೇಂದ್ರಗಳು ಪ್ರತಿದಿನ ಬೆಳಗಿನ 8 ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ನಗರದ ಎಲ್ಲ ಕರ್ನಾಟಕ ಒನ್ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜರ್ ಒದಗಿಸಲಾಗಿದೆ. ಕರ್ನಾಟಕ ಒನ್ ಸಿಬ್ಬಂದಿಗಳಿಗೆ ಮಾಸ್ಕ್ ಒದಗಿಸುವುದರ ಜೊತೆಗೆ ಇನ್ನಿತರ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ.

ಕರ್ನಾಟಕ ಒನ್ ಕೇಂದ್ರಗಳಲ್ಲಿ ಮಹಾನಗರ ಪಾಲಿಕೆಯ ಆಸ್ತಿ ತೆರಿಗೆಯನ್ನು ಸಹ ಪಾವತಿ ಮಾಡಬಹುದಾಗಿದೆ. ಸಾರ್ವಜನಿಕರು ನಗದು, ಚೆಕ್, ಡಿಡಿ, ಕ್ರೆಡಿಟ್, ಡೆಬಿಟ್ ಕಾರ್ಡ್, ಪೇಟಿಎಂ, ಯುಪಿಐ ಮೂಲಕ ಪಾವತಿಸಬಹುದಾಗಿದೆ. ಸಾರ್ವಜನಿಕರು ಮೇಲ್ಕಂಡ ಈ ಕರ್ನಾಟಕ ಒನ್ ಕೇಂದ್ರಗಳು (ಗಾಂಧಿ ಜಯಂತಿ, ಕಾರ್ಮಿಕರ ದಿನಾಚರಣೆ, ಕನ್ನಡ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹಾಗೂ ಚುನಾವಣೆ ಮತ ಚಲಾಯಿಸುವ ದಿನವನ್ನು ಹೊರತುಪಡಿಸಿ) ವರ್ಷದ ಎಲ್ಲ 365 ದಿನಗಳು ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕರ್ನಾಟನ್ ಕೇಂದ್ರಗಳಾದ ಮಿನಿ ವಿಧಾನ ಸೌಧ (ಡಿ.ಸಿ. ಕಚೇರಿ) ದೂರವಾಣಿ ಸಂಖ್ಯೆ 08472-279333, ಕೆ.ಹೆಚ್.ಬಿ. ಕಾಂಪ್ಲೆಕ್ಸ್ ದೂರವಾಣಿ ಸಂಖ್ಯೆ 08472-273960 ಹಾಗೂ ಸುಪರ ಮಾರ್ಕೇಟ್ ದೂರವಾಣಿ ಸಂಖ್ಯೆ 08472-223433ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here