ಕಲಬುರಗಿಯಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ: ಇಬ್ಬರು ಸಾವು ಸೇರಿ 20 ಜನರಿಗೆ ಪಾಜಿಟಿವ್

0
69

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಮೃತರಾದ ಇಬ್ಬರು ಸೇರಿದಂತೆ ಒಟ್ಟು 20 ಜನರಿಗೆ ಶುಕ್ರವಾರ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಸೋಂಕಿತರಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 16 ಜನ, ತೀವ್ರ ಉಸಿರಾಟದ ತೊಂದರೆಯ ಹಿನ್ನೆಲೆಯ ಇಬ್ಬರು (ಮೃತರು) ಮತ್ತು ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದ ಇಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

Contact Your\'s Advertisement; 9902492681

ರೋಗಿ ಸಂಖ್ಯೆ ಪಿ-5909 ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಶಹಾಬಜಾರ (ಜಿಡಿಎ ಕಾಲೋನಿ) ಪ್ರದೇಶದ 31 ವರ್ಷದ ಯುವಕ (ಪಿ-6308), ರೋಗಿ ಸಂಖ್ಯೆ ಪಿ-5910 ಸಂಪರ್ಕದಲ್ಲಿ ಬಂದ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮದ 26 ವರ್ಷದ ಯುವತಿಗೆ (ಪಿ-6309) ಕೊರೋನಾ ಸೋಂಕು ಕಂಡು ಬಂದಿದೆ.

ಕಲಬುರಗಿ ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದ ತೀವ್ರ ಉಸಿರಾಟ ತೊಂದರೆ ಹಿನ್ನಲೆಯ 53 ವರ್ಷದ ಪುರುಷ (ಪಿ-6323 ನಿಧನ) ಮತ್ತು ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ತೀವ್ರ ಉಸಿರಾಟ ತೊಂದರೆ ಹಿನ್ನಲೆಯ 48 ವರ್ಷದ ಪುರುಷ (ಪಿ-6325 ನಿಧನ) ಇವರಿಗೆ ಶುಕ್ರವಾರ ಕೊರೋನಾ ದೃಢವಾಗಿದೆ.

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ 16 ವರ್ಷದ ಯುವಕ (ಪಿ-6310), 54 ವರ್ಷದ ಪುರುಷ (ಪಿ-6311) ಹಾಗೂ 36 ವರ್ಷದ ಮಹಿಳೆ (ಪಿ-6312), ಫರಹತಾಬಾದ ಗ್ರಾಮದ 60 ವರ್ಷದ ವೃದ್ಧೆ (ಪಿ-6313), 36 ವರ್ಷದ ಯುವಕ (ಪಿ-6314) ಹಾಗೂ 23 ವರ್ಷದ ಯುವತಿ (ಪಿ-6315), ಕಿಣ್ಣಿಸಡಕ್ ಗ್ರಾಮದ 42 ವರ್ಷದ ಮಹಿಳೆ (ಪಿ-6316), ಕಮಲಾಪುರ ತಾಲೂಕಿನ ಗೊಬ್ಬೂರವಾಡಿ ಗ್ರಾಮದ 34 ವರ್ಷದ ಪುರುಷ (ಪಿ-6317), 07 ವರ್ಷದ ಬಾಲಕ (ಪಿ-6318), 12 ವರ್ಷದ ಬಾಲಕಿ (ಪಿ-6319), 30 ವರ್ಷದ ಮಹಿಳೆ (ಪಿ-6320), 11 ವರ್ಷದ ಬಾಲಕಿ (ಪಿ-6321) ಹಾಗೂ 23 ವರ್ಷದ ಯುವತಿ (ಪಿ-6322), ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ 25 ವರ್ಷದ ಯುವತಿ (ಪಿ-6324), ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದ 28 ವರ್ಷದ ಯುವತಿ (ಪಿ-6326) ಮತ್ತು ಕರಜಗಿ ಗ್ರಾಮದ 38 ವರ್ಷದ ಮಹಿಳೆಗೆ (ಪಿ-6327) ಕೋವಿಡ್-19 ಸೋಂಕು ತಗುಲಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 816ಕ್ಕೆ ಏರಿದೆ. ಇದರಲ್ಲಿ ಇದೂವರೆಗೆ 345 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 10 ಜನ ನಿಧನ ಹೊಂದಿರುತ್ತಾರೆ. ಉಳಿದಂತೆ 461 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here