ಕಲಬುರಗಿ: ಇಲ್ಲಿನ ಆಟೋನಗರ ಬಡಾವಣೆಯ ಮೈಲಾರಲಿಂಗೇಶ್ವ ಪೆಟ್ರೋಲ್ ಬಂಕ್ ಹತ್ತಿರ ಡಿಎಪಿ ಪರ್ಟಿಲೈಸರ್ ರಸಗೊಬ್ಬರ ಬ್ಯಾಗ್ ನ್ನು ಕಳ್ಳತನ ಮಾಡಿದ ಕ್ಲೀನರ್ ಓರ್ವನನ್ನು ಚೌಕ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಠಾಣೆಯ ಪಿ.ಐ ಶಕೀಲ ಅಹ್ಮದ ಅಂಗಡಿ, ಅಪರಾಧ ವಿಭಾಗದ ಸಿಬ್ಬಂದಿ ಸಿರಾಜ್ ಪಟೇಲ್, ಸೈಯದ್ ತೌಸಿಫ್ ಹುಸೇನ, ರಾಜಕುಮಾರ, ನಾಗೇಂದ್ರ, ಬಂದೇನವಾಜ
ಇವರನ್ನೊಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹೆಬ್ಬಾಳ ಗ್ರಾಮದ ನಿವಾಸಿ ಉಮೇಶ್ ನಾಗೇಂದ್ರಪ್ಪ ಜಿಡ್ಗಿ (45), ಬಂಧಿತ ಆರೋಪಿ, ಲಾರಿ ಕ್ಲೀನರ್ ಆಗಿದ ಈತ ಗುರುವಾರ ರಾತ್ರಿ ವೇಳೆಯಲ್ಲಿ 16,36.000 ಮೌಲ್ಯದ 500 ಡಿಎಪಿ ಫರ್ಟಿಲೈಸರ್ ರಸಗೊಬ್ಬರದ ಬ್ಯಾಗ್ ಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ.
ಹಳೆ ಜೇವರ್ಗಿ ಕಾಲೋನಿ ಮಹ್ಮದ್ ರೈಯಿಸ್ ಅಹ್ಮದ್ ಮಹ್ಮದ ಅಬ್ದುಲ ಸಮದ್ ಜಕ್ರೀಯಾ ಅವರ ದೂರ ಅನ್ವಯ ಚೌಕ್ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.