ಕಲಬುರಗಿ: ಒಂದೇ ವಾರದಲ್ಲಿ ಪೆಟ್ರೋಲ್ ಮತ್ತು ಮತ್ತು ಡೀಸೆಲ್ ಬೆಲೆ ನಾಲ್ಕು ರೂಪಾಯಿಯಷ್ಟು ದುಬಾರಿಗುಳಿಸಿ ಏರಿಕೆ ಮಾಡಿದ ಕೇಂದ್ರ ಸರಕಾರದ ವಿರುದ್ಧ ಕ್ರಮ ಖಂಡಿಸಿ ನಯಾ ಸವೇರಾ ಸಂಘಟನೆ ನೇತೃತ್ವದ ಸದಸ್ಯರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವಾರದಲ್ಲಿ ಪೆಟ್ರೋಲ್ ದರ ಲೀಟರ್ ಗೆ 3,90 ರುಪಾಯಿ ಏರಿಕೆಯಾಗಿದೆ, ಡೀಸೆಲ್ ದರ 4 ರೂಪಾಯಿ ಏರಿಕೆಯಾಗಿದೆ, ಅಂತಾರಾಷ್ಟ್ರೀಯ ಕಚ್ಚಾತೈಲ ಕುಸಿತ ಕಂಡರು ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಖಂಡನೀಯವಾಗಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಮಹಿಮೂದ ಪಟೇಲ್, ಸೈಯದ್ ಏಜಾಜ್ ಅಲಿ ಇನಮ್ದಾರ್, ಸಲೀಂ ಅಹ್ಮದ್ ಚಿತಾಪುರ್, ಅಬ್ದುಲ್ ಮಜೀದ್, ಸಾಜಿದ್ ಅಲಿ ರಂಜೋಳವಿ, ಸೈರಾ ಬಾನು, ಶೇಕ್ ಶಿರಾಜ್ ಪಾಷಾ , ಹೈದರಲಿ ಇನಮ್ದಾರ್, ಸಲೀಂ ಸಗರಿ ,ಖಾಜಾ ಪಟೇಲ್ ಸರಡಗಿ, ಎಂಡಿ ಖಾಲಿಕ ಅಹಮದ್, ರಜಾಕ್ ಚೌದರಿ, ಅಬ್ದುಲ್ ಜಬ್ಬಾರ್, ಮಹಿಬೂಬ್ ಖಾನ್, ಬಾಬಾ ಫಕ್ರುದ್ದಿನ್, ರಿಯಾಜ್ ಪಟೇಲ್, ಅಖಿಲ್ ಪಟೇಲ್, ಜಿಲಾನ್ ಗುತ್ತೇದಾರ್ ,ಬಾಬಾ ಪಟೇಲ, ಉಸ್ಮಾನ್ ಪಟೇಲ್ ರುಕ್ನುದ್ದಿನ್ ಕಾಜಿ, ಅಮಿನುದ್ದಿನ್, ಸಲ್ಮಾನ್ ಪಟೇಲ್, ಹಾರುನ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.