ಅಯೋಧ್ಯೆಯಲ್ಲಿ ದೊರೆತ ಬುದ್ಧ ಸ್ತೂಪಗಳ ರಕ್ಷಿಸಿ ರಾಷ್ಟ್ರೀಯ ಸ್ಮಾರಕ ಮಾಡಿ: ಕ್ರಾಂತಿ

0
66

ಸುರಪುರ: ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ಉದ್ಧೇಶಿಸಿರುವ ಸ್ಥಳದಲ್ಲಿ ನಡೆದ ಉತ್ಖನನ ಕಾರ್ಯದಲ್ಲಿ ಬುದ್ಧಸ್ತೂಪಗಳು ಮತ್ತು ಅಶೋಕ ಚಕ್ರವರ್ತಿಯ ಮೂತಿಗಳು ದೊರೆತಿವೆ. ಸ್ತೂಪ ದ್ವರಿಕಿದ ಸ್ಥಳದಲ್ಲಿ ಹಿಂದೆ ಬುದ್ಧ ವಿಹಾರ ಇರುವುದು ಸಾಬೀತಾಗಿದೆ ಹೀಗಾಗಿ ಅಲ್ಲಿ ರಾಮ ಮಂದಿರ ಬದಲು ರಾಷ್ಟ್ರೀಯ ಸ್ಮಾರಕವಾಗಿ ಬುದ್ಧವಿಹಾರವನ್ನು ನಿರ್ಮಾಣ ಮಾಡುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

Contact Your\'s Advertisement; 9902492681

ನಗರದ ತಹಶಿಲ್ದಾರ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘಷ ಸಮಿತಿ ಕ್ರಾಂತಿಕಾರಿ ಬಣದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ರಾಜಾ ಅಶೋಕ ಚಕ್ರವರ್ತಿ ಕಾಲದಲ್ಲಿ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೌದ್ಧ ಧರ್ಮದ ಸೂಪ್ತಗಳನ್ನು ನಿರ್ಮಿಸಿರುವುದ ಇತುಹಾಸವಾಗಿದೆ ಸಧ್ಯ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮಮಂದಿರ ಸ್ಥಳದಲ್ಲಿ ಬುದ್ಧನ ಸ್ತೂಪಗಳು ಸಿಕ್ಕಿದ್ದು ಅವುಗಳನ್ನು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು ಮತ್ತು ಆ ಸ್ಥಳವನ್ನು ರಾಷ್ಟ್ರೀಯ ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.

ನಂತರ ರಾಷಪತಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಸೋಫಿಯಾ ಸುಲ್ತಾನರ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಜೀಜ್‌ಸಾಬ ಐಕೂರ, ಜೆಟ್ಟೆಪ್ಪ ನಾಗರಾಳ, ಡಾ. ಮಲ್ಲಿಕಾರ್ಜುನ ಆಶನಾಳ, ಬುದ್ದಿವಂತ ನಾಗರಾಳ, ತಿಪ್ಪಣ್ಣ ಶಳ್ಳಗಿ, ಮರಲಿಂಗಪ್ಪ ಹುಣಸಿಹೊಳಿ, ಖಾಜಾ ಹುಸೇನ್, ಮಲ್ಲಿಕಾರ್ಜುನ ಮಳ್ಳಳ್ಳಿ, ರಮೇಶ ಹುಂಡೇಕಲ್, ಶರಣಪ್ಪ ಕುರಕುಂದಿ, ಮರಿಲಿಂಗಪ್ಪ ನಾಟೇಕರ್ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here