ಸಿಪಿಐಎಮ್ ಪಕ್ಷದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

0
61

ಶಹಾಬಾದ: ಕರೊನಾ ಸೊಂಕು ಹರಡುತ್ತಿರುವದರಿಂದ ದೇಶದಲ್ಲಿ ಲಾಕ್ ಡೌನ ಹಿನ್ನೇಲೆಯಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಅನುಕೂಲವಾಗಲು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಪಿಐಎಮ್ ಪಕ್ಷದ ವತಿಯಿಂದ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರರ ಮೂಲಕ ಸಲ್ಲಿಸಲಾಯಿತು.

Contact Your\'s Advertisement; 9902492681

ಸಿಪಿಐಎಮ್ ಪಕ್ಷದ ಕಾರ್ಯದರ್ಶಿ ಅಶೋಕ ಮ್ಯಾಗೇರಿ ನೇತೃತ್ವದಲ್ಲಿ ನಿಯೋಗವು ತಹಶೀಲ್ದಾರ ಕಚೇರಿಗೆ ತೆರಳಿ ಆದಾಯ ತೆರಿಗೆಯಿಂದ ಹೊರಗೆ ಇರುವವರಿಗೆ ಮುಂದಿನ ಆರು ತಿಂಗಳು ೭,೫೦೦ ರೂ. ನಗದು ಖಾತೆಗೆ ವರ್ಗಾವಣೆ ಮಾಡಬೇಕು, ಪ್ರತಿ ವ್ಯಕ್ತಿಗೆ ೧೦ ಕೆಜಿ ಆಹಾರ ಧಾನ್ಯ ಉಚಿತವಾಗಿ ನೀಡಬೇಕು, ಉದ್ಯೋಗ ಖಾತ್ರಿಯೋಜನೆ ಅಡಿಯಲ್ಲಿ ೨೦೦ ದಿನದ ಕೆಲಸ, ಹೆಚ್ಚಿನಕೂಲಿ ನೀಡಬೇಕು, ಮಳೆಗಾಲದಲ್ಲಿ ಉದ್ಯೋಗ ಖಾತ್ರಿ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಬೇಕು, ರಾಷ್ಟ್ರೀಯ ಆಸ್ತಿ ಲೂಟಿ, ಖಾಸಗಿಕರಣ, ಕಾರ್ಮಿಕರ ಕಾನೂನು ತಿದ್ದುಪಡಿ ನಿಲ್ಲಿಸಬೇಕು, ಕರೊನಾ ಆರೋಗ್ಯ ಪರಿಕರ, ವೆಂಟಿಲೇಟರ್ ಗಳನ್ನು ರಾಜ್ಯಕ್ಕೆ ಗರಿಷ್ಠ ಮಟ್ಟದಲ್ಲಿ ವಿತರಸಬೇಕೆಂದು ಆಗ್ರಹಿಸಿ ಉಪತಹಶೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ನಿಯೋಗದಲ್ಲಿ ಭೀಮಶಾ ಹಳ್ಳಿ, ಭೀಮರಾವ, ವೀರಯ್ಯ ಸ್ವಾಮಿ, ರಾಯಪ್ಪ ಹುರಮುಂಜಿ, ಗೋಪಾಲ ರೇಮಗೋಳ, ವಿಜಯಕುಮಾರ ಕಂಠಿಕಾರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here