ಕಲಬುರಗಿ; ನಗರದಲ್ಲಿ ದರೊಡೆಗೈಯುತ್ತಿದ್ದ ನಾಲ್ಕು ಜನರನ್ನು ಬಂಧಿಸಿ, ಬಂಗಾರ ಮತ್ತು ಕಾರು ಜಪ್ತಿ ಮಾಡಿಕೊಳ್ಳುವಲ್ಲಿ ಎಂ.ಬಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಗುಬ್ಬಿ ಕಾಲೋನಿಯ ವ್ಯಕ್ತಿಯೊಬ್ಬರು, ಬುಧವಾರ ನೀಡಿದ್ದ ದೂರಿನನ್ವಯ, ಪೊಲೀಸರು ಜಾಲಬಿಸಿ ಆರೋಪಿಗಳಲ್ಲಿರುವ ಐದು ಗ್ರಾಮ್ ಬಂಗಾರ, ನಗದು 50,000 ರೂಪಾಯಿಯೊಂದಿಗೆ ಅಸೆಂಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಮಹ್ಮದ ಗೌಸ್(22), ಅನ್ವರ್ ಸಯ್ಯದ್(22), ಹಬೀಬ್ ರೆಹಮಾನ್ (20), ಮಹಮ್ಮದ್ ಸರಫ್ ರಾಜ್ (19)ರಾಗಿದ್ದು, ಇವರು ವಿವಿಧ ಕಾಲೋನಿಯ ನಿವಾಸಿಗಳಗಿದ್ದಾರೆ.
ಸದರಿ ಪ್ರಕರಣವು ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್, ಉಪ ಪೊಲೀಸ್ ಆಯುಕ್ತ ಕಿಶೋರ್ ಬಾಬು ಮತ್ತು ಸಹಾಯಕ ಆಯುಕ್ತ ಗಿರೀಶ್ ರವರ ಮಾರ್ಗದರ್ಶನದ ಮೇರೆಗೆ ಎಂ.ಬಿ ನಗರದ ಠಾಣಾಧಿಕಾರಿ ಶಿವಾನಂದ ವಾಲಿಕಾರ, ಎ.ಎಸ್.ಐ ಪಾಂಡುರಂಗ, ಪೊಲೀಸ್ ಸಿಬ್ಬಂದಿ ಬಂದೇನಾವಾಜ್, ಎಚ್.ಎಸ್. ತೋಟದ, ಬೀರಣ್ಣ, ಅಶೋಕ ಕಟಕೆ, ನಡೆಸಿದ ಕಾರ್ಯಚರಣೆಯಲ್ಲಿ ಬಂಧಿಸಲಾಗಿದೆ.