ಕಲಬುರಗಿ: ಜಿಲ್ಲಾ ನ್ಯಾಯವಾದಿಗಳ ಸಂಘದ ವತಿಯಿಂದ ನ್ಯಾಯಾಲಯದ ಮುಖ್ಯದ್ವಾರದಿಂದ ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದವರೆಗೆ ವೀರ ಹುತಾತ್ಮರಿಗೆ ಶ್ರದ್ಧಾಂಜಲಿ ನಿಮಿತ್ತ ಮೆರವಣಿಗೆ ನಡೆಸಿ ಮೇಣದ ಬತ್ತಿ ಬೆಳಗಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗುಲ್ವಾನ್ ಘಾಟಿಯಲಿ ಚೀನಾ ಸೈನಿಕರು ಭಾರತದ ಮೇಲೆ ಆಕ್ರಮಣ ಮಾಡಿದಾಗ ಅವರ ವಿರುದ್ಧ ಹೋರಾಡುತ್ತಾ ಸುಮಾರು ಮೂವತ್ತೈದು ರಿಂದ ನಲವತ್ತ ಮೂರು ಸೈನಿಕರನ್ನು ಹೊಡೆದುರುಳಿಸಿ ವೀರ (ಸಾವು) ಮರಣವನ್ನಪ್ಪಿದ್ದ ಕರ್ನಲ್ ಸಂತೋಷ್ ಬಾಬು ಮತ್ತು ಇತರ ಸೈನಿಕರಿಗೆ ರಾಷ್ಟ್ರ ಪ್ರೇಮಿ ನ್ಯಾಯವಾದಿಗಳಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
LAC ಮತ್ತು POK. ಪ್ರದೇಶಗಳನ್ನು ಮರಳಿ ಪಡೆದುಕೊಳ್ಳಬೇಕು ಮತ್ತು ಚೈನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳ ಮೇಲೆ ತಕ್ಷಣದಿಂದ ನಿರ್ಬಂಧವನ್ನು ಹೇರಬೇಕು, ಚೀನಾದಲ್ಲಿರುವ ರಾಯಭಾರಿಗಳನ್ನು ತಕ್ಷಣ ವಾಪಸ್ ಮರಳಿ ಕರೆಯಿಸಿಕೊಳ್ಳಬೇಕು. ವಿಶ್ವಸಂಸ್ಥೆಯ ಮೇಲೆ ಒತ್ತಡ ಹೇರಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷರಾದ ರಾಜಶೇಖರ ಡೊಂಗರಗಾಂವ್. ಕೇಂದ್ರ ಸರ್ಕಾರಕ್ಕೆ ಆಗ್ರಹಿದರು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಸಂಘದ ಪ್ರಧಾನ ಕಾರ್ಯದರ್ಶಿಯಾದ ಶರಣಬಸಪ್ಪ ಪಸ್ತಾಪುರ,ಕಾಶಿನಾಥ್ ಮುತ್ತಕಪ್ಪಲ್ಲಿ KSBC ಸದಸ್ಯರು, ಖಜಾಂಚಿಗಳಾದ ಸಂತೋಷ್ ಪಾಟೀಲ್, ಜಂಟಿ ಕಾರ್ಯದರ್ಶಿಗಳಾದ ಶಿವಕುಮಾರ್ ಹೆಡೆ, ಸಂಘದ ಮಾಜಿ ಅಧ್ಯಕ್ಷರುಗಳಾದ R K ಹಿರೇಮಠ, ಬಿ. ಆರ್ ಪಾಟೀಲ್, ಮಾಜಿ ಖಜಾಂಚಿ, ಜೇ. ಎಸ್ . ವಿನೋದ್ ಕುಮಾರ್ , ಸಂಜಯ್ ಪತಂಗೆ, ಮಾಜಿ ಕಾರ್ಯದರ್ಶಿ ಬಿ ಎನ್ ಪಾಟೀಲ್, ಸದಸ್ಯ ದೇವನಾಥ್ ಮಾಳಗಿ, ಕಲ್ಯಾಣಪ್ಪ ವಾಗ್ದರಗಿ, ಶ್ರೀನಿವಾಸ್ ಅಂತಲೇ, ನಾಗರಾಜ್ ಜವಳಿಗೆ, ರಾಜಶೇಖರ್ ಡೊಂಗರಗಾವ್ ಇತರರು ಭಾಗವಹಿಸಿದ್ದರು.