ಕಲಬುರಗಿ: ಕೋವಿಡ್-೧೯ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಸಿಪಿಐ ಎಂ ಪಕ್ಷದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಸಿಪಿಐ ಎಂ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ ಪ್ರಸ್ತುತ ದೇಶದಲ್ಲಿ ಕೋವಿಡ್-೧೯, ಕೊರೊನ ಎಂಬ ಮಹಾಮಾರಿ ರೋಗವನ್ನು ಜಗತ್ತಿನಾದ್ಯಂತ ಹರಡಿ ಜನಜೀವನ ಅಸ್ತವ್ಯಸ್ತ ವಾಗಿ ಜನರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಮನಸ್ಸೋ ಇಚ್ಚಾ ನಡೆದುಕೊಳ್ಳುತ್ತಿದೆ. ಮಾಧ್ಯಮ ವರ್ಗದ ಜನರಿಗೆ, ವ್ಯಾಪಾರ ವಹಿವಾಟು ನಡೆಸಲು ತೊಂದರೆ ಯಾಗುತ್ತಿದೆ. ಸರಕು ಸಾಗಣೆಯನ್ನು ಲಾಕ್ ಡೌನ್ ಮೂಲಕ ಬಂದ್ ಮಾಡಿ ತಲ್ಲಣಗೊಂಡಿದೆ.ಈ ವೇಳೆಯಲ್ಲಿ ಸರ್ಕಾರವು ಗಾಯದ ಮೇಲೆ ಬರೇ ಎಳೆದಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆ ಮಾಡಿ ನೋಡಿದರೆ ನಮ್ಮ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಏರಿಕೆ ಮಾಡಿರುವುದನ್ನು ಕೇಂದ್ರ ಸರ್ಕಾರದ ನೀತಿ ಖಂಡನೀಯವಾಗಿದೆ. ಕೋವಿಡ್-೧೯ ಯಿಂದ ಜನರಿಗೆ ಕೆಲಸವಿಲ್ಲದೇ ಅಲೆದಾಡುವಂತಹ ಪರಸ್ಥಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಬೆಲೆ ಏರಿಕೆ ನಿರ್ಧಾರವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ತೈಲ ಬೆಲೆ ಏರಿಕೆಯಿಂದ ದೇಶದಲ್ಲಿ ಸುಮಾರು ೪೫% ರೈತರು ಯಂತ್ರೋಪಕರಣ, ಟ್ರಾಕ್ಟರ್ ಹಾಗೂ ಇನ್ನಿತರೇ ಕೃಷಿ ಚಟುವಟಿಕೆ ಮಾಡಲು ಯಂತ್ರೋಪಕರಣ ಬೇಕು. ಪೆಟ್ರೋಲ್ ಡೀಸೆಲ್ ದರ ಏರಿಸಿರುವುದನ್ನು ಈ ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿದರು.
ಅಶೋಕ್ ಮ್ಯಾಗೆರಿ, ಮೇಘಾರಾಜ ಕಠಾರೆ, ಅಲ್ತಾಫ್ ಇನಾಮದಾರ, ಗುರುನಂದೇಶ ಕೋಣಿನ್, ಎಂಬಿ ಸಜ್ಜನ್, ಆನಂದ ಎನ್ ಜೆ, ಭುಟ್ಟೊ ಸಾಬ್ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.