ಸರ್ವೋಚ್ಚ ನ್ಯಾಯಾಲಯದ ಆದೇಶ ವಿರುದ್ಧ ಕಾರಜೋಳ ಹೇಳಿಕೆಗೆ ಖಂಡನೆ: ಸಂಗಾವಿ

0
77

ಕಲಬುರಗಿ: ಪರಿಶಿಷ್ಠ ಜಾತಿಯಿಂದ ಲಂಬಾಣಿ, ಬೋವಿ ಇತರೆ ಜಾತಿ ತೆಗೆದುಹಾಕಲು ಸವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಗೋವಿಂದ ಕಾರಜೋಳ ಹೇಳಿಕೆ ನೀಡಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯು (ಪರಿಶಿಷ್ಠ ಜಾತಿ ವಿಭಾಗ) ಖಂಡಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಟ ಜಾತಿ ವಿಭಾಗ) ಯ ಅಧ್ಯಕ್ಷ ಮಹಾಂತಪ್ಪ ಸಂಗಾವಿ ತಿಳಿಸಿದ್ದಾರೆ.

ಪರಿಶಿಷ್ಠ ಜಾತಿ ಪಟ್ಟಿಯಿಂದ ಯಾವುದೇ ಜಾತಿಯನ್ನು ಕೈ ಬಿಡುವುದಿಲ್ಲ. ಕೈ ಬಿಡುವ ವಿಚಾರ ಸರ್ಕಾರದ ಮುಂದೆ ಇಲ್ಲ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಸರ್ವೂಚ್ಚ ನ್ಯಾಯಾಲಯದ ಆದೇಶ ವಿರುದ್ಧ ಉಪ ಮುಖ್ಯಮಂತ್ರಿಗಳಾಗಿ ಸಮಾಜ ಕಲ್ಯಾಣ ಸಚಿವರಾಗಿ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಠಿ ಮಾಡುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತವೇ ಎಂದರು.

Contact Your\'s Advertisement; 9902492681

ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ರಾಷ್ಟ್ರೀಯ ಆಯೋಗದ ಶಿಫಾರಸ್ಸಿಗೆ ಸುಪ್ರೀಂಕೋರ್ಟ್ ಪರಿಶಿಷ್ಠರಲ್ಲದವರಿಗೆ ಪರಿಶಿಷ್ಠ ಜಾತಿ ಪಟ್ಟಿಯಿಂದ ತೆಗೆದು ಹಾಕಲು ಆದೇಶ ಕುರಿತು ಪರಿಶಿಷ್ಠ ಜಾತಿಯವರೆ ಆದ ತಾವು ಈ ರೀತಿ ಹೇಳಿಕೆ ಕೊಡುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.

ಶತ ಶತಮಾನಗಳಿಂದ ಶೋಷಣೆ ಅನುಭವಿಸುತ್ತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಮೂಲ ಆಸ್ಪೃಶ ಜಾತಿಗಳು ಇಂದು ಈ ಸ್ಪರ್ಶ ಜಾತಿಗಳ ಸೇರ್ಪಡೆಯಿಂದ ಅವಕಾಶಗಳಿಂದ ವಂಚಿತರಾಗುತ್ತಾರೆ. ಒಬ್ಬ ಜವಾಬ್ದಾರಿಯುತ ಸಮಾಜದ ನಾಯಕರಾಗಿರುವ ಕಾರಜೋಳ ಅವರು ಬಿಜೆಪಿಯ ಕೈಗೊಂಬೆಯಾಗಿ ಅಧಿಕಾರಕ್ಕಾಗಿ ಇಡಿ ಸಮಾಜವನ್ನು ಬಲಿಪಶುಮಾಡುತ್ತಿದ್ದಾರೆ.

ಬಿಜೆಪಿ ಪಕ್ಷದ ಲಂಬಾಣಿ ಶಾಸಕರು, ಸಂಸದರು ತಮ್ಮನ್ನು ಪಟ್ಟಿಯಿಂದ ಕೈ ಬಿಡಬೇಡಿ ಎಂದು ಪತ್ರ ಚಳುವಳಿ ಮಾಡುತ್ತಾ, ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ, ಇವರು ಮಾತ್ರ ಅಧಿಕಾರದ ದಾಹಕ್ಕೆ ಜೋತುಬಿದ್ದು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ತಮ್ಮ ಧೋರಣೆಯನ್ನು ಬದಲಿಸಿ ಮೂಲ ಅಸ್ಪೃಶ ಜನಾಂಗದವರ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಒತ್ತಾಯಿಸಲಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ (ಪರಿಶಿಷ್ಠ ಜಾತಿ ವಿಭಾಗ) ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ನೀಲೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here