ಶಹಾಪುರ : ನಗರದ ಹೊರವಲಯದ ಫಿಲ್ಟರ್ ಬೆಡ್ ನಿಂದ ಸರಬರಾಜು ಆಗುತ್ತಿರುವ ನೀರಿನ ಪೈಪ್ಲೈನ್ ಒಡೆದಿರುವ ಕಾರಣ ಶಹಾಪುರ ನಗರಕ್ಕೆ ಎರಡು ದಿನಗಳ ಕಾಲ ನೀರಿನ ಅಭಾವ ಉಂಟಾಗಲಿದೆ ಎಂದು ನಗರ ಸಭೆ ಆಯುಕ್ತರಾದ ರಮೇಶ್ ಪಟ್ಟೇದಾರ್ ಅವರು ಪ್ರಕಟಣೆಗೆ ತಿಳಿಸಿದ್ದಾರೆ.
ಪೈಪ್ ಲೈನ್ ಕಾರ್ಯ ದುರಸ್ತಿ ತೀವ್ರಗತಿಯಲ್ಲಿ ಸಾಗಿದ್ದು ಎರಡು ದಿನದಲ್ಲಿ ಕಾಮಗಾರಿ ಮುಗಿದ ತಕ್ಷಣ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಅಲ್ಲಿಯವರೆಗೂ ಶಹಾಪುರ ನಗರದ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.