ಕಲಬುರಗಿ: ಮಂಗಳವಾರ ಜಿಲ್ಲೆಯ 46, ಬೀದರ ಮತ್ತು ಯಾದಗಿರಿ ಜಿಲ್ಲೆಯ ತಲಾ ಓರ್ವ ರೋಗಿ ಸೇರಿದಂತೆ ಒಟ್ಟು 48 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಕಲಬುರಗಿ ಕೋವಿಡ್-19 ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ಚಿಂಚೋಳಿ ತಾಲೂಕಿನ 1, ಕಾಳಗಿ ತಾಲೂಕಿನ 2, ಕಮಲಾಪುರ ತಾಲೂಕಿನ 7, ಚಿತ್ತಾಪುರ ತಾಲೂಕಿನ 8, ಅಫಜಲಪುರ ತಾಲೂಕಿನ 3, ಕಲಬುರಗಿ ತಾಲೂಕಿನ 8, ಆಳಂದ ತಾಲೂಕಿನ 14, ಕಲಬುರಗಿ ನಗರದ 3, ಬೀದರ ಮತ್ತು ಯಾದಗಿರಿ ಜಿಲ್ಲೆಯ ತಲಾ ಓರ್ವ ರೋಗಿ ಕೋರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತ 1232 ಜನರಲ್ಲಿ 779 ಜನ ಗುಣಮುಖರಾಗಿದ್ದಾರೆ. ಉಳಿದಂತೆ 442 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು