ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ಕಲಬುರಗಿ- ಅಫಜಲಪುರ ರಾಜ್ಯ ಹೆದ್ದಾರಿಯ ಶರಣ ಸಿರಸಗಿ ಗ್ರಾಮದ ಆರು ಎಕರೆ ಕೃಷಿ ಭೂಮಿಯಲ್ಲಿ ೧೧೦೦ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ತೆಂಗಿನ ಸಸಿಗಳನ್ನು ನೆಡುವ ಮೂಲಕ ಬೃಹತ್ ಹಸಿರಿಕರಣಕ್ಕೆ ಮಂಗಳವಾರ ಚಾಲನೆ ನೀಡಿದರು.
ಪೂಜ್ಯ ಡಾ.ಅಪ್ಪಾಜಿ ಅವರೊಂದಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ರಾದ ಮಾತೋಶ್ರಿ ದಾಕ್ಷಾಯಿಣಿ ಅವ್ವನವರು ಹಾಗೂ ಸಹೋದರಿಯರಾದ ಶಿವಾನಿ ಎಸ್. ಅಪ್ಪಾ, ಕೋಮಲ್ ಎಸ್. ಅಪ್ಪಾ, ಮತ್ತು ಮಹೇಶ್ವರಿ ಎಸ್. ಅಪ್ಪಾ, ಅವರು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಕೈ ಜೋಡಿಸಿದರು.
ಡಾ.ಅಪ್ಪಾಜಿ ಮತ್ತು ಮಾತೋಶ್ರಿ ಅವ್ವಾಜಿ ಮಾತನಾಡಿ, ಹೆಚ್ಚಿನ ಇಳುವರಿ ನೀಡುವ ತೆಂಗಿನ ಸಸಿಗಳನ್ನು ಹಚ್ಚುವದರಿಂದ ಶರಣಬಸವ ವಿಶ್ವವಿದ್ಯಾಲಯಕ್ಕೆ ಮೀಸಲಿಟ್ಟ ಈ ಸುತ್ತಮುತ್ತಲಿನ ಭೂಮಿಯನ್ನು ಹಸಿರುಗೊಳಿಸಲು ಸಹಕಾರಿಯಾಗುತ್ತದೆ ಎಂದರು. ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮಿ ಮಕಾ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕಿರಣ ಮಾಕಾ ಮತ್ತು ಇತರರು ಉಪಸ್ಥಿತರಿದ್ದರು.